ಉಡುಪಿ: ಆಶಾನಿಲಯಕ್ಕೆ ನಿಧಿ ಸಂಗ್ರಹಿಸಿಕೊಟ್ಟ ಕಾರ್ಟೂನು ಹಬ್ಬ
ಉಡುಪಿ: ಆಶಾನಿಲಯಕ್ಕೆ ನಿಧಿ ಸಂಗ್ರಹಿಸಿಕೊಟ್ಟ ಕಾರ್ಟೂನು ಹಬ್ಬ
ಉಡುಪಿ, ಜ.20: ಉಡುಪಿಯಲ್ಲಿ ನಡೆದ ಎರಡು ದಿನಗಳ ಪ್ರೊಡಿಜಿ ಕಾರ್ಟೂನು ಹಬ್ಬದಲ್ಲಿ ವ್ಯಂಗ್ಯಚಿತ್ರಗಾರ ಸತೀಶ್ ಆಚಾರ್ಯ ತಂಡದವರು ಸ್ಥಳದಲ್ಲೇ ಕ್ಯಾರಿಕೇಚರ್ (ಭಾವಚಿತ್ರ) ರಚಿಸುವ ಮೂಲಕ ಸಂಗ್ರಹಿಸಿದ 1.25ಲಕ್ಷ ರೂ. ನಿಧಿಯನ್ನು ಉಡುಪಿಯ ವಿಶೇಷ ಮಕ್ಕಳ ಶಾಲೆ ಆಶಾನಿಲಯಕ್ಕೆ ಅರ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ನಿಧಿ ಸಂಗ್ರಹಕ್ಕಾಗಿ ಆಯೋಜಿಸಲಾಗಿದ್ದ ಚಿತ್ರನಿಧಿ ಕಾರ್ಯಕ್ರಮವನ್ನು ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸೋಮವಾರ ತನ್ನ ಕ್ಯಾರಿಕೇಚರ್ ಬಿಡಿಸಿಕೊಂಡು ನಿಧಿಗೆ ಸಹಾಯ ನೀಡುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಲ್ಲೂರು ಶಿವರಾಮ ಶೆಟ್ಟಿ, ಡಾ.ಕೃಷ್ಣ ಪ್ರಸಾದ್ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಘಟಕ ಡಾ.ಪಿ.ವಿ.ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Next Story





