ಕಾಸರಗೋಡು : ಕೊಲೆ ಪ್ರಕರಣ -ಸಿಪಿಎಂ ಕಾರ್ಯದರ್ಶಿ ಪಿ. ಜಯರಾಜನ್ ವಿರುದ್ದ ಸಿಬಿಐ ಮೊಕದ್ದಮೆ
ಕಾಸರಗೋಡು : ಆರ್ ಎಸ್ ಎಸ್ ಕಾರ್ಯಕರ್ತ ಕದಿರೂರು ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ. ಜಯರಾಜನ್ ವಿರುದ್ದ ಸಿಬಿಐ ಮೊಕದ್ದಮೆ ದಾಖಲಿಸಿದೆ.
ಹತ್ಯೆಗೆ ಸಂಚು ನಡೆಸಿರುವುದಾಗಿ ಲಭಿಸಿದ ಸುಳಿವಿನ ಹಿನ್ನಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. ಈ ಹಿಂದೆ ನೆರೋತ್ ನ ಶುಕೂರ್ ಕೊಲೆ ಪ್ರಕರಣದಲ್ಲೂ ಜಯರಾಜನ್ ವಿರುದ್ದ ಕೇಸು ದಾಖಲಿಸಲಾಗಿತ್ತು.
ನಿಯಮ ವಿರುದ್ದ ಚಟುವಟಿಕೆ ಕಾಯ್ದೆ ( ಯುಎಪಿಎ ) ಯಂತೆ ಕೇಸು ದಾಖಲಿಸಲಾಗಿದೆ.
ಜಯರಾಜನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಳಶ್ಯೇರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು.
ಸಿ ಬಿ ಐ ತನಿಖೆ ಯಲ್ಲಿ ಜಯರಾಜನ್ ಹೆಸರಿಲ್ಲ ದಿರುವುದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.
ಇದರ ಬೆನ್ನಿಗೆ ಸಿಬಿಐ ಮೊಕದ್ದಮೆ ಯನ್ನು ದಾಖಲಿಸಿದೆ. ಮನೋಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಕ್ರಮ್ ಜೊತೆ ಜಯರಾಜನ್ ಗೆ ನಂಟು ಇದ್ದು ಕೆಲ ವರ್ಷಗಳ ಹಿಂದೆ ಪಿ. ಜಯರಾಜನ್ ರ ಕೊಲೆಗೆ ಯತ್ನಿಸಿದ್ದಕ್ಕಾಗಿ ಪ್ರತಿಕಾರವಾಗಿ ಮನೋಜ್ ನನ್ನು ಕೊಲೆಗೈಯಲಾಗಿದೆ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ . ನಾಲ್ಕು ಬಾರಿ ಕೊಲೆಗೆ ಸಂಚು ನದಸಲಾಗಿತ್ತು. ರಿಜು ಎಂಬಾತನ ಮನೆಯಲ್ಲಿ ಸಂಚು ನಡೆದಿತ್ತು . ಜಯರಾಜನ್ ಸಂಚಿನಲ್ಲಿ ಶಾಮೀಲಾಗಿದ್ದ ಎಂದು ಸಿಬಿಐ ಉಲ್ಲೇಖಿಸಿದೆ.
2004 ರ ಸೆಪ್ಟಂಬರ್ ಒಂದರಂದು ಮನೋಜ್ ನನ್ನು ಕೊಲೆ ಗೈಯ್ಯಲಾಗಿತ್ತು.







