ವಿಮಾನ ನಿಲ್ದಾಣದ ಬಳಿ 6 ಸಾವಿರ ಜನರು ಕುಳಿತುಕೊಳ್ಳಲು ಸಾಮರ್ಥ್ಯವಿರುವ ಬೃಹತ್ ಸಮ್ಮೇಳನ ಸಭಾಂಗಣ: ಆರ್ ವಿ ದೇಶಪಾಂಡೆ

ಬೆಂಗಳೂರು.ಜ.21:ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರವನ್ನು ಅತೀ ಶೀಘ್ರದಲ್ಲಿ ವಿಶ್ವದರ್ಜೆಯ ಮಟ್ಟಕ್ಕೆ ಏರಿಸಲಾಗುವುದು ಎಂದು ಮದ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ ಇಂದಿಲ್ಲಿ ತಿಳಿಸಿದರು.
ನಗರದಲ್ಲಿ 6 ದಿನಗಳ ಇಮ್ ಟೆಕ್ಸ್ ಹಾಗೂ ಉಪಕರಣಗಳ ತಂತ್ರಜ್ಞಾನ ಮೇಳ- 2016 ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 6 ಸಾವಿರ ಜನರು ಕುಳಿತುಕೊಳ್ಳಲು ಸಾಮರ್ಥ್ಯವಿರುವ ಬೃಹತ್ ಸಮ್ಮೇಳನ ಸಭಾಂಗಣವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಉಪಕರಣಗಳ ತಯಾರಿಕೆಯಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ,ಕರ್ನಾಟಕ ರಾಜ್ಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು 2000 ಸಾಲನಲ್ಲಿಯೇ ಪ್ರಾರಂಭಿಸಿದೆ,ಅನೇಕ ಉಪಕರಣ ಉತ್ಪಾದನಾ ಕಂಪನಿಗಳು ಈ ಹಿಂದೆಯೇ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟವೆ, ಬೆಳಗಾವಿ ನಗರ ಕೂಡ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಕರ್ನಾಟಕ ಕೈಗಾರಿಕೆ ಹಾಗೂ ಉದ್ಯಮಗಳ ವಿಚಾರದಲ್ಲಿ ಸ್ಪರ್ದಾತ್ಮಕತೆಯನ್ನು ಹಾಗೂ ಗುಣಾತ್ಮಕತೆನ್ನು ಕಾಪಾಡಿಕೊಂಡು ಬಂದಿದೆ, ಹಾಗೇಯೇ ವಿಪುಲ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಹೇಳಿದ ಅವರು ಬಂಡವಾಳ ಹೂಡಿಕೆಗೆ ಕರ್ನಾಟಕ ಸರ್ಕಾರ ಮುಕ್ತವಾಗಿದ್ದು ಅಫಾರ ಮಾನವ ಸಂಪನ್ಮೂಲ ಹಾಗೂ ಮಾನವ ಸಾಮರ್ಥ್ಯವನ್ನು ಹೊಂದಿದೆ. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಉತ್ಪಾದನಾ ವಲಯದಲ್ಲಿ ಮುಂಚೂಣಿ ನಾಯಕತ್ವ ಹೊಂದಿದ್ದು, ಕರ್ನಾಟಕ ಎಲ್ಲ ವಿಚಾರದಲ್ಲಿ ಮುಂದಿದೆ ಎಂಬುದನ್ನು ಪ್ರಧಾನ ಮಂತ್ರಿಗಳಿಗೆ ಕೈಗಾರಿಕಾದ್ಯೋಮಿಗಳು ಮನವರಿಕೆ ಮಾಡಿಕೊಡಬೇಕು ಎಂದು ಕಿವಿ ಮಾತು ಹೇಳಿದರು.
ರಾಜ್ಯ ಸರ್ಕಾರ ದ್ವಿತೀಯ ದರ್ಜೆ ನಗರಗಳನ್ನು ಅಭಿವೃದ್ದಿ ಪಡಿಸುವ ಉದ್ದೇಶ ಹೊಂದಿದೆ ಬೆಳಗಾಂ, ಯಾದಗಿರಿ,ಮಂಗಳೂರು,ಕಲಬುರಗಿ,ತುಮಕೂರು,ಸೇರಿದಂತೆ ಹಲವಡೆ ಕೈಗಾರಿಕೆಗಳ ಸ್ಥಾಪನೆಗಾಗಿ 25ಸಾವಿರ ಎಕರೆ ಭೂ ಬ್ಯಾಂಕ್ ಹೊಂದಲಾಗಿದೆ, ಈಗಾಗಲೇ ಅಗತ್ಯ ಬಂಡವಾಳ ಹೂಡಿಕೆಗಾಗಿ ಯೋಜನಾ ನಕ್ಷೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಬರುವ ಫೆಬ್ರವರಿಯಂದು ನಡೆಯಲ್ಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ 7ದೇಶಗಳು ಸಹಭಾಗಿತ್ವ ವಹಿಸಲ್ಲಿದ್ದು, ಈ ಸಮಾವೇಶಕ್ಕೆ ಭಾಗವಹಿಸುವಂತೆ ಮುಕ್ತ ಆಹ್ವಾನ ನೀಡಿದ ಅವರು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಘೋಷಣೆಯಂತೆ ’’ಆಹ್ವಾನ ಕರ್ನಾಟಕ,ಅವಿಷ್ಕಾರ ಕರ್ನಾಟಕ, ಹೂಡಿಕೆ ಕರ್ನಾಟಕ’’ಎಂಬ ಉದ್ದೇಶವನ್ನು ಹೊಂದಿದೆ, ಭವಿಷ್ಯ ಭಾರತದ ನಿರ್ಮಾಣಕ್ಕೆ ಕರ್ನಾಟಕ ನಾಂದಿ ಹಾಡಲಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಇಂಟೆಕ್ಸ್ ಅಧ್ಯಕ್ಷ ಜೇಮ್ಸ್ದ ಎನ್ ಗೋದ್ರೆಜ್, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ವಿಶ್ವಜೀತ್ ಸಹಾಯ್, ನೀತಿ ಆಯೋಗದ ಡಾ. ವಿ.ಕೆ ಸರಸ್ವತ್ ಅನೇಕರು ಉಪಸ್ಥಿತರಿದ್ದರು, ಪ್ರದರ್ಶನದಲ್ಲಿ ಪ್ರಮುಖವಾಗಿ ಜಪಾನ್.ಚೈನಾ,ತೈವಾನ್ ಸೇರಿದಂತೆ 23 ದೇಶಗಳು ಭಾಗವಹಿಸಿವೆ.







