ಮಂಗಳೂರು; ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

ಮಂಗಳೂರು,ಜ,21; ಸಚಿವ ಬಂಡಾರು ದತ್ತಾತ್ರೆಯ ಅವರನ್ನು ಕೂಡಲೆ ಬಂಧಿಸಬೇಕೆಂದು ಬಹುಜನ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಮುಖಂಡ ಸುರೇಶ್ ಪಿ.ಬಿ ಆಗ್ರಹಿಸಿದರು.
ಬಹುಜನ ವಿದ್ಯಾರ್ಥಿ ಸಂಘ(ಬಿವಿಎಸ್)ದ ನೇತೃತ್ವದಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ಸಾವಿಗೆ ಕಾರಣಕರ್ತರಾದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರೋಹಿತ್ ಸಾವು ವ್ಯವಸ್ಥೆಯು ದಲಿತರನ್ನು ತುಚ್ಚವಾಗಿ ಕಾಣುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ವ್ಯವಸ್ಥೆಯನ್ನು ಪ್ರಶ್ನಿಸಬೇಕಾಗಿದೆ. ರೋಹಿತ್‌ನನ್ನು ಕಳೆದುಕೊಂಡ ದಲಿತ ಸಮುದಾಯ ಅನಾಥವಾಗಿದೆ. ರೋಹಿತ್ ಸಾವನ್ನು ವ್ಯರ್ಥವಾಗಲು ಬಿಡುವುದಿಲ್ಲ. ದಲಿತರ ಶೋಷಣೆ ಮಾಡಿದವರನ್ನು ಜೈಲಿಗಟ್ಟಬೇಕು ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಬಿಎಸ್‌ಪಿ ಮುಖಂಡ ಗೋಪಾಲ ಮುತ್ತೂರು, ಸಿಎಫ್‌ಐ ಮುಖಂಡ ಮುಹಮ್ಮದ್ ಇರ್ಷಾದ್ , ಸಮಾಜಪರಿವರ್ತನೆ ಮುಖಂಡ ರಮಾನಂದ ಬೆಳ್ತಂಗಡಿ, ಬಿವಿಎಸ್ ಮುಖಂಡರುಗಳಾದ ರಘುಧರ್ಮ ಸೇನ್, ಉದಯ್ ಬೆಳ್ತಂಗಡಿ, ಪ್ರವೀಣ್, ಚೆನ್ನಪ್ಪ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು.








