ಮೂಡುಬಿದಿರೆ : ಬ್ಯಾಂಕಿಂಗ್ ಸೌಲಭ್ಯಗಳ ಬಗೆಗೆ ಮಾಹಿತಿ ಸಭೆ

ಮೂಡುಬಿದಿರೆ: ಸ್ಥಳೀಯ ಜೈನ ಪ್ರೌಢಶಾಲೆಯ ಸರ್ದಾರ್ ಪಟೇಲ್ ಗ್ರಾಹಕ ಕ್ಲಬ್ ನ ವತಿಯಿಂದ ಬ್ಯಾಂಕಿಂಗ್ ಗ್ರಾಹಕ ವ್ಯವಹಾರಗಳ ಬಗೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಜನವರಿ 21 ರಂದು ಮಾಹಿತಿ ನೀಡಲಾಯಿತು. ಸ್ಥಳೀಯ ಭಾರತೀಯ ಸ್ಟೇಟ್ ಬೇಂಕಿನ ಮುಖ್ಯ ಹಿರಿಯ ಪ್ರಬಂಧಕರಾದ ಸದಾನಂದ ಶೆಟ್ಟಿ ಹಾಗೂ ಅಧಿಕಾರಿ ರಾಜೇಶ್ ರವರುಗಳು ಉಳಿತಾಯ ಖಾತಾ ನಿರ್ವಹಣೆ, ಎಟಿಎಂ ಕಾರ್ಡು ಬಳಕೆಯ ಸಂದರ್ಭ ವಹಿಸಬೇಕಾದ ಮುನ್ನೆಚ್ಚರಿಕೆ, ವಿದ್ಯಾರ್ಥಿ ಸಾಲ; ಸೌಲಭ್ಯ ಇತ್ಯಾದಿ ಎಲ್ಲಾ ವಿಚಾರಗಳ ಬಗೆಗೆ ಮಾಹಿತಿಯನ್ನು ನೀಡಿದರು. ಧರ್ಮಾತೀತವಾದ ಗ್ರಾಹಕ ವಿಶ್ವಾಸಿ ಸಂಸ್ಥೆಯಾದ ಬ್ಯಾಂಕುಗಳು ಗ್ರಾಹಕರ ವಾರ್ಷಿಕ ವ್ಯವಹಾರಗಳನ್ನು ಗಮನಿಸಿ ಸಾಲ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿವೆ ಎಂದು ತಿಳಿಸಿದ ಹಿರಿಯ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ರಾಯೀ ರಾಜ ಕುಮಾರರು ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಕಾರ್ಯದರ್ಶಿ 9 ನೇ ತರಗತಿಯ ಸೋನಿಯಾ ಸ್ವಾಗತಿಸಿ ವಂದಿಸಿದರು.
Next Story





