ಕಾಸರಗೋಡು: ಮೊಬೈಲ್ ಅದಾಲತ್ ಗೆ ಚಾಲನೆ

ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮೊಬೈಲ್ ಅದಾಲತ್ ಗೆ ಗುರುವಾರ ನ್ಯಾಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶ ಟಿ. ಎಸ್ ಮೂಸಾದ್ ಚಾಲನೆ ನೀಡಿದರು.
ಚೀಫ್ ಜ್ಯುಡಿಶಿಯಲ್ ಮೇಜಿಷ್ಟ್ರೆಟ್ ಎನ್. ವಿ ರಾಜು, ಜಿಲ್ಲಾ ಸೇವಾ ಪ್ರಾಧಿಕಾರ ಕಾರ್ಯದರ್ಶಿ ಫಿಲಿಪ್ ಥಾಮಸ್ , ಕೆ. ಸನಿಲ್ ಕುಮಾರ್ , ಎಂ . ಶಾನು ಪಣಿಕ್ಕರ್ , ಗೋಪಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಮೊದಲ ದಿನ ವರ್ಕಾಡಿ , ಮೀಂಜ ಪಂಚಾಯತ್ ಗಳಲ್ಲಿ ಪ್ರಯಾಣ ಬೆಳೆಸಿತು.
ಜನವರಿ ೩೦ ರ ತನಕ ಕಾಸರಗೋಡು, ಮಂಜೇಶ್ವರ ತಾಲೂಕಿನ ವಿವಿಧೆಡೆ ಸಂಚರಿಸಲಿದೆ.
ನಾಳೆ (22) ಬೆಳಿಗ್ಗೆ 11 ಗಂಟೆಗೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಸಭಾಂಗಣ , ಬಳಿಕ ಮಂಜೇಶ್ವರ ಅಂಬೇಡ್ಕರ್ ಕಾಲನಿ ಗೆ ಭೇಟಿ ನೀಡಲಿದೆ.
ಅಪರಾಹ್ನ 2 ಗಂಟೆಗೆ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾನೂನು ಜಾಗ್ರತಿ ತರಗತಿ ನಡೆಯಲಿದೆ.
Next Story





