ಮೂಡುಬಿದಿರೆ : ಸೋಶಿಯಲ್ ಜಸ್ಟಿಸ್ ಪಾರ್ಟಿ ಆಫ್ ಇಂಡಿಯಾ ಉದಯ
ಮೂಡುಬಿದಿರೆ: ಭ್ರಷ್ಟಾಚಾರ, ಶೋಷಣೆ, ಕೋಮುವಾದ, ಗೋಹತ್ಯೆ, ಮಾತಾಂತರ ನಿರ್ಮೂಲನೆವಾಗಳಿ ಮತ್ತು ಜಾತ್ಯತೀತತೆ ಮತ್ತು ಪ್ರಜಾತಂತ್ರ, ಸಾಮಾಜಿಕ ನ್ಯಾಯ ರಾಷ್ಟ್ರೀಯತೆಯ ಬಲವರ್ಧನೆಯೊಂದಿಗೆ ಭ್ರಷ್ಟಾಚಾರ ರಹಿತ ಹಾಗೂ ಶೋಷಣಾ ರಹಿತ ಸಮೃದ್ಧ, ಗ್ರಾಮ ಸ್ವರಾಜ್ಯದ ಬಲಿಷ್ಟ ಭಾರತ ರಾಷ್ಟ್ರ ನಿರ್ಮಾಣದ ಧ್ಯೇಯದೊಂದಿಗೆ ಸೊಶಿಯಲ್ ಜಸ್ಟಿಸ್ ಪಾರ್ಟಿ ಆಫ್ ಇಂಡಿಯಾ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಪಕ್ಷದ ಸಂಸ್ಥಾಪಕ ಸ್ಟೀವನ್ ವಿನ್ಸೆಂಟ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಜಿ ಪ್ರಧಾನಿ ದಿ.ವಿಶ್ವನಾಥ ಪ್ರತಾಪ ಸಿಂಗ್, ಲಾಲ್ ಬಹದ್ದೂರ್ ಶಾಸ್ತ್ರಿ, ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ. ಅಬ್ದುಲ್ ಕಲಾಂ, ರೈತ ನೇತಾರ ಮಹೇಂದ್ರಸಿಂಗ್ ಟಿಕಾಯತ್ ತತ್ವ ಸಿದ್ಧಾಂತ ಹಾಗೂ ವ್ಯಕ್ತಿತ್ವವೇ ಪಕ್ಷಕ್ಕೆ ಸ್ಪೂರ್ತಿ. ಪಕ್ಷದ ಸಂಘಟನೆಗೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಚಾರ ಕೈಗೊಂಡಿದ್ದು, ರಾಷ್ಟ್ರವ್ಯಾಪಿ ವಿಸ್ತಾರಿಸುವ ಯೋಜನೆಯಿದೆ ಎಂದರು. ಪದಾಧಿಕಾರಿಗಳಾದ ಕರುಣಾಕರ ಪ್ರಭು, ರಾಜೇಶ್ ಲೋಬೋ ಸುದ್ದಿಗೋಷ್ಠಿಯಲ್ಲಿದ್ದರು. --
ಭಾರತ ರತ್ನ ನೀಡಲು ಆಗ್ರಹ
ಭ್ರಷ್ಟಾಚಾರ ರಹಿತ ಭಾರತಕ್ಕಾಗಿ ಹೋರಾಟ ನಡೆಸಿದ ಜಾತ್ಯತೀತೆಯ ನೈಜ ಪ್ರತಿಪಾದಕ ದಿ.ವಿಶ್ವನಾಥ ಪ್ರತಾಪ ಸಿಂಗ್ ಹಾಗೂ ಅಹಿಂಸೆ ಹಾಗೂ ಸಮಾನತೆಯ ಪ್ರತಿಪಾದಕ ರಾಷ್ಟ್ರ ಸಂತ ತರುಣ ಸಾಗರ್ ಮುನಿಗಳಿಗೆ ‘ಭಾರತ ರತ್ನ’ಪ್ರಶಸ್ತಿ ನೀಡುವಂತೆ ಸ್ಟೀವನ್ ವಿನ್ಸೆಂಟ್ ಆಗ್ರಹಿಸಿದರು.
---





