ಉದ್ಯಾವರ ಉರೂಸ್: ಉದ್ಯಾವರ ಶ್ರೀ ಅರಸು ದೈವಗಳ ಕ್ಷೇತ್ರದಿಂದ ಹೊರೆ ಕಾಣಿಕೆ

ಕುಂಜತ್ತೂರು, ಜ.21: ಉದ್ಯಾವರ ಮಖಾಂ ಉರೂಸ್ ಪ್ರಯುಕ್ತ ಬುಧವಾರದಂದು ರಾತ್ರಿ ಕಳೆದ 800 ವರ್ಷಗಳಿಂದ ಭಾವೈಕ್ಯದಲಿರುವ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದಿಂದ ಹೊರೆ ಕಾಣಿಕೆ ತರಲಾಯಿತು. ಈ ಸಂದರ್ಭ ಉದ್ಯಾವರ ಉರೂಸ್ ಸಮಿತಿ ಹಾಗೂ ಜುಮಾ ಮಸೀದಿ ಅಧ್ಯಕ್ಷ ಅತಾವುಲ್ಲ ತಂಘಲ್, ಖಾದರ್ ಫಾರೂಕ್, ಮೋನು ಹಾಜಿ, ಪಳ್ಳಿ ಕುಂಞಿ ಹಾಜಿ, ಪಿ ಎ ಹನೀಫ್ ಎಂಬಿವರ ನೇತೃತ್ವದಲ್ಲಿ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಬಳಿಕ ದರ್ಗಾ ಶರೀಪ್ ಗೆ ಆಗಮಿಸಿದ ಉದ್ಯಾವರ ಕ್ಷೇತ್ರ ಪದಾಧಿಕಾರಿಗಳು ಹೊರೆ ಕಾಣಿಕೆಯಾಗಿ ತಂದ ಹಣ್ಣು ಹಂಪಲು ಹಾಗೂ ಮಲ್ಲಿಗೆ ಹೂಗಳನ್ನು ಮಸೀದಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಸಾಮರಸ್ಯವನ್ನು ಮರೆದರು.
ಈ ಸಂದರ್ಭ ಮಾತಾಡಿದ ಅತಾವುಲ್ಲ ತಂಘಲ್ ಪುರಾತನ ಕಾಲದಿಂದಲೇ ಉದ್ಯಾವರ ಮಸೀದಿ ಹಾಗೂ ಕ್ಷೇತ್ರ ಬಹಳ ಉತ್ತಮವಾದ ಬಾಂಧವ್ಯವನ್ನು ಹೊಂದಿದೆ. ಇವತ್ತಿನ ನಿಮ್ಮ ಹೊರೆ ಕಾಣಿಕೆಯನ್ನು ನಾವು ಬಹಳ ಸಂತೋಷದಿಂದ ಸ್ವೀಕರಿಸುತಿದ್ದೇವೆ. ಈ ಸಂದೇಶದಲ್ಲಿ ಒಂದು ಸ್ಪಷ್ಟವಾಗುತ್ತಿದೆ ಹಿಂದೂಗಳು, ಮುಸಲ್ಮಾನರು ಸಹೋದರರು. ನಮ್ಮ ಈ ಬಾಂಧವ್ಯ ಎಂದಿಗೂ ಶಾಶ್ವತವಾಗಿರಲಿ. ಎಂದು ಶುಭ ಹಾರೈಸಿದರು. ಕ್ಷೇತ್ರದ ವತಿಯಿಂದ ತರಲಾದ ಹೊರೆ ಕಾಣಿಕೆಗೆ ಮಂಜು ಭಂಡಾರಿ, ಕೃಷ್ಣ ಭಟ್, ರಾಜ ಬೆಲ್ಚಾಡ, ಮುಂಡಿತ್ತಾಯ ಬೆಲ್ಚಾಡ, ಧಾರ್ಮಿಕ ಹಿರಿಯ ಮುಂದಾಳು ಕೃಷ್ಣಾ ಶಿವ ಕೃಪಾ ಕುಂಜತ್ತೂರು ಹಾಗೂ ರಾಘವ ಪಟ್ನ ನೇತೃತ್ವ ನೀಡಿದರು.
ಬಳಿಕ ಜಮಾಹತ್ ಖತೀಬ್ ಅಬ್ದುಲ್ ಸಲಾಂ ಮದನಿಯವರ ಪ್ರಾರ್ಥಣೆ ಬಳಿಕ ಇ ಪಿ ಅಬೂಬಕ್ಕರ್ ಮುಸ್ಲಿಯಾರ್ ಅಲ್ ಖಾಸಿಮಿ ಪತ್ತಾನಪುರಂ ಮುಖ್ಯ ಪ್ರಭಾಷಣ ನಡೆಸಿದರು. ಜನವರಿ 22 ರಂದು ವಲಿಯುಲ್ಲಾಯಿ ಜಬ್ಬಾರ್ ಮಸ್ತಾನ್ ಮೂಳೂರು ದುಆ ಗೈಯುವರು. ರಹಮತ್ತುಲ್ಲ ಖಾಸಿಮಿ ಮುತ್ತೇಡಂ ಮುಖ್ಯ ಪ್ರಭಾಷಣ ಗೈಯಲಿದ್ದಾರೆಂದು ಪ್ರಕಟನೆ ತಿಳಿಸಿದೆ.








