ಟೊರಾಂಟೊ ಓಪನ್ ಸ್ಕ್ವಾಷ್ ಟೂರ್ನಿ: ದೀಪಿಕಾ ಸೆಮಿಫೈನಲ್‌ಗೆ
ಟೊರಾಂಟೊ, ಜ.21: ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಟೊರಾಂಟೊ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
17ನೆ ರ್ಯಾಂಕಿನ ದೀಪಿಕಾ ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಈಜಿಪ್ಟ್‌ನ ಸಲ್ಮಾ ಇಬ್ರಾಹೀಂರನ್ನು 12-10, 11-2, 11-4 ಸೆಟ್‌ಗಳ ಅಂತರದಿಂದ ಮಣಿಸಿದರು.
ದೀಪಿಕಾ ಸೆಮಿಫೈನಲ್‌ನಲ್ಲಿ ಗಯಾನದ ಆರನೆ ಶ್ರೇಯಾಂಕಿತೆ ನಿಕೊಲೆಟ್ ಫೆರ್ನಾಂಡಿಸ್‌ರನ್ನು ಎದುರಿಸಲಿದ್ದಾರೆ.
‘‘ ಸಲ್ಮಾ ವಿರುದ್ಧ ಈ ಹಿಂದೆ ಆಡಿರುವ ಪಂದ್ಯಗಳಲ್ಲಿ ಸೋತಿದ್ದೆ. ಮೊದಲ ಗೇಮ್ ನಿರ್ಣಾಯಕವಾಗಿತ್ತು. 7-10 ಹಿನ್ನಡೆಯ ನಡುವೆಯೂ ಮೊದಲ ಗೇಮ್‌ನ್ನು ಗೆದ್ದುಕೊಂಡಿದ್ದೆ. ಮೊದಲ ಗೇಮ್‌ನ ನಂತರ ಆತ್ಮವಿಶ್ವಾಸದಿಂದ ಆಡಿದ್ದೆ. ಪ್ರತಿಭಾವಂತ ಆಟಗಾರ್ತಿ ಸಲ್ಮಾ ವಿರುದ್ಧ ಗೆಲುವು ಸಾಧಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ದೀಪಿಕಾ ಪ್ರತಿಕ್ರಿಯಿಸಿದರು.
Next Story





