ಜೂಜು ಅಡ್ಡೆ ಮೇಲೆ ದಾಳಿ: ಆರೋಪಿಗಳ ಬಂಧನ
ಹುಣಸೂರು, ಜ.21: ಅಕ್ರಮವಾಗಿ ಜೂಜಾಡುತ್ತಿದ್ದ ಜೂಜುಅಡ್ಡೆ ಮೇಲೆ ಹುಣಸೂರು ಗ್ರಾಮಾಂತರ ಪೋಲಿಸರು ದಾಳಿ ಮಾಡಿ ಜೂಜಿನ ಹಣದೊಂದಿಗೆ ಆರು ಮಂದಿಯನ್ನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ.
ಆರೋಪಿಗಳನ್ನು ಕಿರಂಗೂರಿನ ಬೋರೆಗೌಡ, ಹರಳಳ್ಳಿಯ ಮಾದೆಗೌಡ, ಅಝಾದ್ ನಗರದ ಇಕ್ಬಾಲ್, ನೆಲ್ಲೂರು ಪಾಲದಸ್ವಾಮಿನಾಯ್ಕ ಹಾಗೂ ನಾಗಪುರ ಹಾಡಿಯ ಸಣ್ಣಪ್ಪ ಎಂದು ಗುರುತಿಸಲಾಗಿದೆ. ವರು ತಾಲೂಕಿನ ಕಿರಂಗೂರು ಗ್ರಾಮದ ಹುಲಿಕೆರೆ ಸಮೀಪ ಜೂಜಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಜೂಜಿಗೆ ಇಟ್ಟಿದ್ದ 3,700 ರೂ. ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಸೈ ಪುಟ್ಟಸ್ವಾಮಿ, ಸಿಬ್ಬಂದಿ ರಮೇಶ್, ರವಿ, ಅನಂತು, ಮಧು, ರವಿಕುಮಾರ್, ರಾಜ ರತ್ನಂ ಭಾಗವಹಿಸಿದ್ದರು.
Next Story





