ಕೆಸಿಎಫ್ ‘ಅಸ್ಸುಪ್ಫಾ’ ಕಲಿಕಾ ಅಭಿಯಾನಕ್ಕೆ ಚಾಲನೆ

ಸೌದಿ ಅರೇಬಿಯಾ, ಜ.21: ಅನಿವಾಸಿ ಮುಸ್ಲಿಮ್ ಕನ್ನಡಿಗರಲ್ಲಿ ನೈಜ ಇಸ್ಲಾಮೀ ಶಿಕ್ಷಣವನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ಜಿಸಿಸಿ ಮಟ್ಟದಲ್ಲಿ ಹಮ್ಮಿಕೊಂಡಿರುವ ‘ಅಸ್ಸುಪ್ಫಾ’ಕಲಿಕಾ ಅಭಿಯಾನಕ್ಕೆ ಸೌದಿಯಾದ್ಯಂತ ಚಾಲನೆ ದೊರೆತಿದೆ. ದಮ್ಮಾಮ್ನಲ್ಲಿ ಇತ್ತೀಚೆಗೆ ನಡೆದ ರಾಷ್ಟೀಯ ಸಮಾವೇಶದಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ, ಸೌದಿಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಆದೂರು ಮಜ್ಲಿಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸೈಯದ್ ಆಶ್ರಫ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಯೂಸುಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಅಂತಾರಾಷ್ಟ್ರೀಯ ಶಿಕ್ಷ ಣ ವಿಭಾಗದ ಅಧ್ಯಕ್ಷ ಖಮರುದ್ದೀನ್ ಗೂಡಿನಬಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಅಂತಾರಾಷ್ಟ್ರೀಯ ಸಂಯೋಜಕರಾದ ಎನ್.ಎಸ್.ಅಬ್ದುಲ್ಲಾ ಮಂಜನಾಡಿ, ಶರೀಫ್ ಬಾಖವಿ, ಉಡುಪಿ ಡಿವಿಜನ್ ಎಸ್ಸೆಸ್ಸೆಫ್ ಅಧ್ಯಕ್ಷ ಅಶ್ರಫ್ ಅಮ್ಜದಿ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. 2016ರ ಕೆಸಿಎಫ್ ಕ್ಯಾಲಂಡರನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು. ಕೆಸಿಎಫ್ ರಾಷ್ಟೀಯ ಸಮಿತಿಯ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಸ್ವಾಗತಿಸಿದರು. ರಝಾಕ್ ಸಖಾಫಿ ಮಚ್ಚಂಪಾಡಿ ಕಿರಾಅತ್ ಪಠಿಸಿದರು. ನೌಶಾದ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಫೈಝಲ್ ಕೃಷ್ಣಾಪುರ ವಂದಿಸಿದರು.





