ರಾಜ್ಯ ಪ್ರತಿನಿಧಿಯಾಗಿ ಆಯ್ಕೆ

ಬಂಟ್ವಾಳ, ಜ.21: ದ.ಕ. ಜಿಲ್ಲಾ ಗ್ರಾಪಂ ಪ್ರತಿನಿಧಿಗಳ ಒಕ್ಕೂಟದಿಂದ ರಾಜ್ಯ ಪ್ರತಿನಿಧಿಯಾಗಿ ಪುರುಷ ಎನ್.ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಮತ್ತು ಜಿಲ್ಲಾ ಒಕ್ಕೂಟಗಳನ್ನು ರಚಿಸಿದ್ದು ರಾಜ್ಯ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗಿತ್ತು.
ಸಾಲಿಯಾನ್ ಕಳ್ಳಿಗೆ ಗ್ರಾಮದಿಂದ ಸತತ 5ನೆ ಬಾರಿಗೆ ಚುನಾಯಿತರಾದವರು. ಪಂಚಾಯತ್ ಉಪಾಧ್ಯಕ್ಷರಾಗಿ, ಮೂರ್ತೆದಾರರ ಸೇವಾ ಸಹಕಾರಿ ಸಂಘ ಪುದು ಇದರ ಅಧ್ಯಕ್ಷರಾಗಿದ್ದು, ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷರೂ ಆಗಿದ್ದಾರೆ.
Next Story





