ಸಿಯರಾ ಲಿಯೋನ್‌ನಲ್ಲಿ 2ನೆ ಎಬೋಲ ಪ್ರಕರಣ
ಫ್ರೀಟೌನ್ (ಸಿಯರಾ ಲಿಯೋನ್), ಜ. 21: ಸಿಯರಾ ಲಿಯೋನ್ ಸೇರಿದಂತೆ ಪಶ್ಚಿಮ ಆಫ್ರಿಕ ಎಬೋಲ ಮುಕ್ತವಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಬಳಿಕ, ಸಿಯರಾ ಲಿಯೋನ್‌ನಲ್ಲಿ ಎರಡು ಎಬೋಲ ಪ್ರಕರಣಗಳು ದಾಖಲಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆಯ ಮರುದಿನವೇ ಸಿಯರಾ ಲಿಯೋನ್‌ನಲ್ಲಿ ಪ್ರಥಮ ಹೊಸ ಎಬೋಲ ಪ್ರಕರಣ ವರದಿಯಾಗಿತ್ತು.
ಈ ತಿಂಗಳ ಆರಂಭದಲ್ಲಿ ಎಬೋಲಕ್ಕೆ ಬಲಿಯಾದ 22 ವರ್ಷದ ಮಹಿಳೆಯ ಸಮೀಪದ ಸಂಬಂಧಿಯೊಬ್ಬರು ಈಗ ಎರಡನೆ ಎಬೋಲ ರೋಗಿಯಾಗಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.
Next Story





