ಇನ್‌ಕ್ರೆಡಿಬಲ್ ಇಂಡಿಯಾ: ರಾಯಭಾರಿಗಳಾಗಿ ಬಿಗ್‌ಬಿ-ಪ್ರಿಯಾಂಕಾ

ಹೊಸದಿಲ್ಲಿ, ಜ.21: ಸುಮಾರು ಒಂದು ತಿಂಗಳ ನಿರೀಕ್ಷೆಯ ಬಳಿಕ, ಚಿತ್ರತಾರೆಯರಾದ ಅಮಿತಾಭ್ ಬಚ್ಚನ್ ಹಾಗೂ ಪ್ರಿಯಾಂಕಾ ಚೋಪ್ರಾ, ಸರಕಾರದ ‘ಇನ್‌ಕ್ರೆಡಿಬಲ್ ಇಂಡಿಯಾ’ದ ಬ್ರಾಂಡ್ ರಾಯಭಾರಿಗಳಾಗಿ ಆಯ್ಕೆಯಾಗಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ತುಂಬಿದೆಯೆಂಬ ಟೀಕೆಯ ಮೂಲಕ ಬಿಜೆಪಿ ನೇತೃತ್ವದ ಸರಕಾರಕ್ಕೆ ಸಿಟ್ಟು ತರಿಸಿದ್ದ ನಟ ಆಮಿರ್ ಖಾನ್‌ರೊಂದಿಗಿನ ಗುತ್ತಿಗೆಯನ್ನು ರದ್ದುಪಡಿಸಿದ ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಈ ಇಬ್ಬರು ತಾರೆಯರ ಆಯ್ಕೆ ನಡೆದಿದೆ.
ಖಾನ್ ಬ್ರಾಂಡ್ ರಾಯಭಾರಿಯಾಗಿ ಒಂದು ದಶಕದ ಕಾಲ ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸಿದ್ದರು. ಖ್ಯಾತ ಕ್ರೀಡಾಪಟುಗಳು ಸೇರಿದಂತೆ ಅನೇಕ ಬಹುಮುಖ ಪ್ರತಿಭಾವಂತರನ್ನು ‘ಇನ್‌ಕ್ರೆಡಿಬಲ್ ಇಂಡಿಯಾ’ದ ರಾಯಭಾರಿಗಳಾಗುವುದಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು ಪಟ್ಟಿ ಮಾಡಿತ್ತು.
Next Story





