ನಾಳೆ ಎರ್ಮಾಳು ಬಡಾದಲ್ಲಿ ‘ಜನಪದ ಉತ್ಸವ’
ಪಡುಬಿದ್ರೆ, ಜ.21: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜ.23ರಂದು ಎರ್ಮಾಳು ಬಡಾ ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿಶೇಷ ಘಟಕ ಯೋಜನೆ 2015-16ರ ಅಡಿಯಲ್ಲಿ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ‘ಜನಪದ ಉತ್ಸವ’ ಹಮ್ಮಿ ಕೊಳ್ಳಲಾಗಿದೆ.
ಗುರುವಾರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಇಲಾಖೆಯ ಎಚ್.ರಂಗಪ್ಪ ಈ ಬಗ್ಗೆ ಮಾಹಿತಿ ನೀಡಿ, ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಡುಬಿದ್ರೆ ಠಾಣಾಧಿಕಾರಿ ಅಜ್ಮತ್ ಅಲಿ ಉತ್ಸವ ಉದ್ಘಾಟಿಸುವರು. ಇದಕ್ಕೆ ಮುನ್ನ ಎರ್ಮಾಳು ರಾಷ್ಟ್ರೀಯ ಹೆದ್ದಾರಿಯಿಂದ ಕಾಲೇಜು ತನಕ ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳ ಸಾಂಸ್ಕೃತಿಕ ತಂಡಗಳ ಮೆರವಣಿಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ವಿಚಾರ ಗೋಷ್ಠಿ, ಪ್ರತಿಕ್ರಿಯೆ, ಪ್ರಶ್ನೋತ್ತರ, ಸಂವಾದ, ಪ್ರಾತ್ಯಕ್ಷಿಕೆ, ಪುರಾತನ ಜನಪದ ವಸ್ತು ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ವಿವಿಧ ತಂಡಗಳಿಂದ ಡೊಳ್ಳು ಕುಣಿತ, ಪೂಜಾ ಕುಣಿತ, ಹುಲಿವೇಷ, ಮಾದಿರ-ಶಾರ್ದೂಲ-ತೆಂಬೆರೆ ನೃತ್ಯ, ಪಾಡ್ದನಾ ಹಾಡು, ಕಂಗಿಲು, ಸಿರಿ ರಚನೆ ಪ್ರಾತ್ಯಕ್ಷಿಕೆ, ವೀರಗಾಸೆ, ಚೆಂಡೆ ವಾದನ, ಚೆನ್ನು ಕುಣಿತ ಕಂಸಾಳೆ, ಾಲಕ್ಕಿ ಕುಣಿತ ಕರಗ ಕೋಲಾಟ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಕು ಪಾಂಗಾಳ, ಚಂದ್ರಹಾಸ ಉಪಸ್ಥಿತರಿದ್ದರು.





