ರಸ್ತೆ ಕಾಮಗಾರಿ: ಸಂಚಾರ ಮಾರ್ಪಾಡು
ಬೆಂಗಳೂರು, ಜ. 21: ನಗರದ ನಂದಿದುರ್ಗ ರಸ್ತೆ ಪ್ರಸ್ತುತ ದ್ವಿಮುಖ ಸಂಚಾರದ ರಸ್ತೆಯಾಗಿದ್ದು, ಈ ರಸ್ತೆಯ ಜೆಸಿ ನಗರ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಹಜ್ ಕ್ಯಾಂಪ್ ವರೆಗೆ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಜೆಸಿ ನಗರ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಹಜ್‌ಕ್ಯಾಂಪ್ ವರೆಗೆ ವಾಹನ ಸಂಚಾರ ನಿರ್ಬಂಧಿಸಿದೆ.
ಜೆಸಿ ನಗರ ಪೊಲೀಸ್ ಠಾಣೆಯಿಂದ ನಂದಿದುರ್ಗ ಕಡೆಗೆ ಚಲಿಸುವ ವಾಹನಗಳು ಜಯಮಹಲ್ ರಸ್ತೆಯ ಜಯಮಹಲ್ ಪ್ಯಾಲೇಸ್ ಹೊಟೇಲ್ ಜಂಕ್ಷನ್ ವರೆಗೆ ಚಲಿಸಿ ಎಡತಿರುವು ಪಡೆದು ಮಿಲ್ಲರ್ಸ್ ರಸ್ತೆಯ ಮೂಲಕ ಹಜ್ ಕ್ಯಾಂಪ್ ತಲುಪಬಹುದು. ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಲಾಗಿದೆ.
Next Story





