ಮುರಿದ ಅಕ್ತರ್-ಅಧುನಾ ಜೊತೆಯಾಟ !

ಹೊಸದಿಲ್ಲಿ, ಜ.21: "ಭಾಗ್ ಮಿಲ್ಕಾ ಭಾಗ್" ಚಿತ್ರ ಖ್ಯಾತಿಯ ನಟ ಫರ್ರಾನ್ ಅಖ್ತರ‍್ ಮತ್ತು ಕೇಶವಿನ್ಯಾಸಗಾರ್ತಿ ಅಧುನಾ ಅಖ್ತರ‍್ ದಾಂಪತ್ಯ ಬದುಕು ಮುರಿದು ಬಿದ್ದಿದೆ,
ರಣಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಜೊತೆಯಾಟ ಕೊನೆಗೊಂಡಿದೆ ಎಂಬ ಸುದ್ದಿ ಹರಡಿರುವಾಗಲೇ ಬಾಲಿವುಡ್‌ನ ಚಿತ್ರ ನಿರ್ದೇಶಕ ಫರ್ರಾನ್ ಅಖ್ತರ‍್ -ಆಧುನಾ ನಡುವಿನ ಸಂಬಂಧ ಚೆನ್ನಾಗಿಲ್ಲ, ಮುರಿದು ಬಿದ್ದಿದೆ ಎಂಬ ವರದಿ ಬಂದಿದೆ.
ಹದಿನೈದು ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ದಂಪತಿಗಳಿಗೆ ಶಾಕಿಯಾ ಮತ್ತು ಅಕಿರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ಧಾರೆ.
Next Story





