ಜ.24ರಂದು ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕೋತ್ಸವ
ಮಂಗಳೂರು, ಜ.21: ಗುರುಪುರ ಬಂಟರ ಮಾತೃಸಂಘದ ವಾರ್ಷಿ ಸಮಾವೇಶ ಮತ್ತು ಮಹಾಸಭೆ ಜ.24ರಂದು ಗುರುಪುರ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ಜರಗಲಿದೆ.
ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡಲಿರುವರು. ಸಮಾವೇಶದ ಬಳಿಕ ಕಾಪು ಪ್ರಶಂಸ ಕಲಾ ತಂಡದಿಂದ ‘ಬಲೆ ತೆಲಿಪುಗ’ ಹಾಸ್ಯ ಕಾರ್ಯಕ್ರಮ ಮತ್ತು ಯುವ ಬಂಟರ ಸಂಘದ ಸದಸ್ಯರಿಂದ ‘ನೃತ್ಯ ಸಿಂಚನ’ ನಡೆಯಲಿದೆ.
Next Story





