ಇಂದು ಅಡಿಕೆ ಚಹಾ ಉದ್ಘಾಟನೆ
ಬೆಂಗಳೂರು, ಜ.21: ಶಿವಮೊಗ್ಗ ಜಿಲ್ಲೆಯ ನಿವೇದನ್ ನೆಂಪೆ ಅಡಿಕೆಯಿಂದ ಚಹಾ ಮಾಡುವುದನ್ನು ಸಂಶೋಧಿಸಿದ್ದು, ಈ ಚಹಾ ಪುಡಿಯ ಉದ್ಘಾಟನಾ ಕಾರ್ಯಕ್ರಮವು ಜ.22ರಂದು ನಗರದ ಹೊಟೇಲ್ ಶೆರಟಾನ್ ಗ್ರಾಂಡ್‌ನಲ್ಲಿ ನಡೆಯಲಿದೆ ಎಂದು ಗ್ರೀನ್ ರೆಮಿಡೀಸ್‌ನ ಮುಖ್ಯಸ್ಥ ವೇಣುಗೋಪಾಲ್ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಂಸದ ಡಾ.ಎಂ.ರಾಮಾ ಜೋಯಿಸ್, ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಆರೋಗ್ಯ ಸಚಿವ ಯು.ಟಿ. ಖಾದರ್ ಮತ್ತಿತರರು ಭಾಗವಹಿಸುತ್ತಿದ್ದಾರೆಂದು ತಿಳಿಸಿದರು.
Next Story





