ಇಂದಿನಿಂದ ಹೋಮಿಯೋಪತಿ ಕಾನ್ಫರೆನ್ಸ್
ಬೆಂಗಳೂರು, ಜ. 21: ಹೋಮಿಯೋಪತಿ ಚಿಕಿತ್ಸೆಗೆ ಸಂಬಂಧಿಸಿದಂತೆ ಪಿರಮಿಡ್ ವ್ಯಾಲಿ ಇಂಟರ್ ನ್ಯಾಷನಲ್ ರಿಸರ್ಚ್ ಫೌಂಡೇಷನ್ ವತಿ ಯಿಂದ ಜ.22 ರಿಂದ ನಾಲ್ಕು ದಿನ ಗಳ ಕಾಲ ಕನಕಪುರ ರಸ್ತೆಯಲ್ಲಿರುವ ಪಿರಮಿಡ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ವರ್ಲ್ಡ್ ಆಫ್ ಕ್ವಾಂಟಿನಮ್ ಮೆಡಿಸನ್ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯ ಡಾ. ಬಿ.ಎಂ.ಹೆಗ್ಡೆೆ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮಾಡಲಿದ್ದು, ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಬ್ರಹ್ಮರ್ಶಿ ಪಾತ್ರಿಜಿ ವಹಿಸಲಿದ್ದಾರೆ. ಅತಿಥಿಗಳಾಗಿ ಸಿಬಿಐ ಮಾಜಿ ನಿರ್ದೇಶಕರಾದ ಡಾ.ಕಾರ್ತಿಕೇಯನ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಹೋಮಿಯೋಪತಿ ಔಷಧಿ ಸೇವನೆ ಮಾಡಿದರೆ ರೋಗಗಳು ಶಾಶ್ವತವಾಗಿ ನಿವಾರಣೆಯಾಗುತ್ತದೆ. ಜೊತೆಗೆ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ನಮ್ಮ ಸಂಸ್ಥೆ ಜೊತೆಯಲ್ಲಿ ಕೆನಡ, ಅಮೆರಿಕ, ಇಂಗ್ಲೆಂಡ್ ದೇಶದ ಪ್ರತಿಷ್ಠಿತ ವೈದ್ಯರು ಈ ಗಿಡಮೂಲಿಕೆಗಳ ಔಷಧಿ ತಯಾರಿಕೆಯಲ್ಲಿ ಕೈ ಜೊಡಿಸಿದ್ದಾರೆ ಎಂದು ತಿಳಿಸಿದರು.