ಕೊಳವೆ ಬಾವಿ: ಅನುಮತಿ ಕಡ್ಡಾಯ
ಬೆಂಗಳೂರು, ಜ. 21: ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಗಳನ್ನು ಕೊರೆಯುವ ವಾಹನಗಳು ಕಡ್ಡಾಯವಾಗಿ ಅನುಮತಿಯನ್ನು ಪಡೆ ದಿರಬೇಕೆಂದು ಅಂತರ್ಜಲ ಇಲಾ ಖೆಯ ಭೂ ವಿಜ್ಞಾನಿ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಬೋರ್‌ವೆಲ್ ಯಂತ್ರಗಳನ್ನು ಹೊಂದಿರುವ ಮಾಲಕರು, ಏಜೆನ್ಸಿಗಳು, ಅನುಮತಿಯಿಲ್ಲದೆ ಕೊಳವೆ ಬಾವಿ ಗಳನ್ನು ಕೊರೆಯಬಾರದು. ಕೊರೆಸುವ ಮುನ್ನ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿದ ವಾಹನಗಳ ವಿವರವನ್ನು ಇಲಾಖಾ ವೆಬ್‌ಸೈಟ್ http://khanija.ncode.in/sitepages/Groundwaterinfo.aspxನಲ್ಲಿ ನೋಡಬಹುದು ಎಂದು ತಿಳಿಸಲಾಗಿದೆ.
Next Story





