ಐಸಿಸ್‌ನಿಂದ ಜೀವಬೆದರಿಕೆ ತಳ್ಳಿ ಹಾಕಿದ ರಕ್ಷಣಾ ಸಚಿವ
ಹೊಸದಿಲ್ಲಿ: ತನಗೆ ಅಥವಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಐಸಿಸ್‌ನಿಂದ ಜೀವ ಬೆದರಿಕೆ ಇರುವುದನ್ನು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಗುರುವಾರ ತಳ್ಳಿಹಾಕಿದರು.
ಮೋದಿ ಮತ್ತು ಪಾರಿಕ್ಕರ್ ಅವರಿಗೆ ಜೀವ ಬೆದರಿಕೆಯೊಡ್ಡಿ ಐಸಿಸ್ ಕಳುಹಿಸಿದ್ದ ಅನಾಮಧೇಯ ಪೋಸ್ಟ್‌ಕಾರ್ಡೊಂದು ಕಳೆದ ವಾರ ಗೋವಾ ಸಚಿವಾಲಯವನ್ನು ತಲುಪಿತ್ತು.
ಗುರುವಾರ ಇಲ್ಲಿ ಸುದ್ದಿಗಾರರು ಆ ಕುರಿತು ಪ್ರಶ್ನಿಸಿದಾಗ ಅಂತಹ ಯಾವುದೇ ಬೆದರಿಕೆಯನ್ನು ತಳ್ಳಿಹಾಕಿದ ಪಾರಿಕ್ಕರ್, ಅದು 50 ಪೈಸೆಯ ಪೋಸ್ಟ್‌ಕಾರ್ಡ್‌ನಲ್ಲಿ ಬಂದಿತ್ತು. ಅದರಲ್ಲೇನೂ ವಿಶೇಷವಿಲ್ಲ ಎಂದು ಹೇಳಿದರು. ಗೋವಾ ಪೊಲೀಸರು ಪತ್ರದ ಪ್ರತಿಗಳನ್ನು ರಾಜ್ಯದಲ್ಲಿಯ ಎಲ್ಲ ಪೊಲೀಸ್ ಠಾಣೆಗಳಿಗೆ ವಿತರಿಸಿದ್ದು,ಪ್ರಕರಣವನ್ನು ಭಯೋತ್ಪಾದನೆ ನಿಗ್ರಹ ದಳಕ್ಕೆ ಹಸ್ತಾಂತರಿಸಲಾಗಿದೆ.
Next Story





