ಮೈನಿಂಗ್ ಮಾಫಿಯಾ ತಡೆಗೆ ಹೊಸ ನೀತಿ

ನವದೆಹಲಿ: ನಿರ್ಮಾಣ ಕಾಮಗಾರಿ ಹಾಗೂ ಪರಿಸರದ ನಡುವೆ ಸಮತೋಲನ ತರುವ ಕಳಕಳಿಯಿಂದ ಮರಳು ಸೇರಿದಂತೆ ಅಲ್ಪಖನಿಜಗಳನ್ನು ಹೊರತೆಗೆಯಲು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರ ಅನ್ವಯ ಮರಳುಗಾರಿಕೆ ಸೇರಿದಂತೆ ಇಂಥ ಗಣಿಗಾರಿಕೆ ಚಟುವಟಿಕೆಗಳಿಗೆ ಕೇಂದ್ರದ ಪರಿಸರ ಸಚಿವಾಲಯದ ನಿರಾಕ್ಷೇಪಣಾ ಪತ್ರ ಕಡ್ಡಾಯ.
ಹೊಸ ನೀತಿಯ ಅನ್ವಯ ಮೊಟ್ಟಮೊದಲ ಬಾರಿಗೆ, ಗಣಿಗಾರಿಕೆಗೆ ಪರಿಸರ ನಿರಾಕ್ಷೇಪಣಾ ಪತ್ರ ನೀಡುವ ಅಧಿಕಾರವನ್ನು ಪರಿಸರ ಸಚಿವಾಲಯ ಜಿಲ್ಲಾಮಟ್ಟದ ಸ್ಥಳೀಯ ಸಮಿತಿಗೆ ನೀಡಿದೆ. ಐದು ಹೆಕ್ಟೇರ್‌ವರೆಗಿನ ಪ್ರದೇಶದ ಗಣಿಗಾರಿಕೆಗೆ ಜಿಲ್ಲಾಮಟ್ಟದ ಸಮಿತಿ ನಿರಾಕ್ಷೇಪಣಾ ಪತ್ರ ನೀಡಬಹುದು. ಮರಳು ಹೊರತಾಗಿ ಆವೆಮಣ್ಣು, ಸುಣ್ಣದ ಕಲ್ಲು, ಬಳಪದ ಕಲ್ಲು, ಅಗತೆಗೆ ಇದು ಅನ್ವಯಿಸುತ್ತದೆ.
ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನೀತಿ ಜಾರಿಗೊಳಿಸಲಾಗಿದೆ. ಒಂದು ಪರಿಸರ ನಿರಾಕ್ಷೇಪಣಾ ಪತ್ರ ನೀಡಿಕೆಯನ್ನು ವಿಕೇಂದ್ರೀಕರಿಸುವುದು ಹಾಗೂ ಮಾಹಿತಿ ತಂತ್ರಜ್ಞಾನ ಆಧರಿತ ನಿಗಾ ವ್ಯವಸ್ಥೆಯ ಮೂಲಕ ಮರಳು ಮಾಫಿಯಾ ಪಡೆಯುವುದು" ಎಂದು ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದ್ದಾರೆ.
ಇದಕ್ಕಾಗಿ ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳು ಆಂಡ್ರಾಯ್ಡಾ ಅಪ್ಲಿಕೇಶನ್, ಜಿಪಿಎಸ್ ಹಾಗೂ ಬಾರ್ ಕೋಡಿಂಗ್ ವ್ಯವಸ್ಥೆಯನ್ನು ಮರಳು ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.







