ದುಬೈ: ಎಸ್ ಡಿ ಪಿ ಐ ದ.ಕ. ಜಿಲ್ಲಾಧ್ಯಕ್ಷರಿಗೆ ಸ್ವಾಗತ ಕಾರ್ಯಕ್ರಮ

ದುಬೈ: ಇಂಡಿಯನ್ ಕಲ್ಚರಲ್ ಸೊಸೈಟಿ ಕರ್ನಾಟಕ ಇದರ ವತಿಯಿಂದ ಜ.22ರಂದು ರಾತ್ರಿ 8.30ಕ್ಕೆ ಅಲ್ ಘುಸೈಸ್ ರಸ್ತೆ ಸ್ಟೇಡಿಯಂ ಮೆಟ್ರೋ ಸ್ಟೇಷನ್, ಲುಲು ಹೈಪರ್ ಮಾರ್ಕೆಟ್ ಸಮೀಪದ ಕ್ರೆಸೆಂಟ್ ಇಂಗ್ಲಿಷ್ ಹೈ ಸ್ಕೂಲ್ ದುಬೈ ಸಭಾಂಗಣದಲ್ಲಿ ಎಸ್ ಡಿ ಪಿ ಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಅವರಿಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ.
ಪ್ರಸಕ್ತ ಭಾರತದಲ್ಲಿ ಮುಸ್ಲಿಮರ ಮತ್ತು ಹಿಂದುಳಿದ ವರ್ಗಗಳ ಈಗಿನ ಪರಿಸ್ಥಿತಿ ಎಂಬ ವಿಷಯದಲ್ಲಿ ಹನೀಫ್ ಖಾನ್ ಕೊಡಾಜೆ ಮಾತನಾಡಲಿದ್ದಾರೆ. ಈ ಸಂದರ್ಭ ರಾಜಕೀಯ ಮುಖಂಡರು ಹಾಗೂ ಇತರರು ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ 050 8551205, 055 9276564 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ರಫಿಕಲಿ ಕೊಡಗು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Next Story





