ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ದೊಡ್ಡ ಜೋಕ್ : ಕರಣ್ ಜೋಹರ್

ಜೈಪುರ, ಜ.22: ಪ್ರಜೆಗಳಿಗೆ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಭಾರತದಲ್ಲಿ ಈ ಹೊತ್ತು "ಒಂದು ದೊಡ್ಡ ಜೋಕ್ ಆಗಿದೆ " ಎಂದು ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ‍್ ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನದಲ್ಲಿ ಜೈಪುರ ಸಾಹಿತ್ಯೋತ್ಸವದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರಲ್ಲಿ ಅಸಹಿಷ್ಣುತೆಯ ಚರ್ಚೆಯಲ್ಲಿ ನೀವು ಯಾಕೆ ಭಾಗಿಯಾಗಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುವ ಮೂಲಕ ತನ್ನ ಅಸಮಾಧಾನ ವಕ್ತಪಡಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಆಧಾರದಲ್ಲಿ ನೀವೆನಾದರೂ ಮಾತನಾಡಿದರೆ ಜೈಲು ಪಾಲಾಗುವ ಭೀತಿ ಇದೆ ಎಂದರು.
"ನಿಮ್ಮ ವೈಯಕ್ತಿಕ ಬದುಕಿನ ಬಗ್ಗೆ ನಿಮಗೆ ಏನನ್ನು ಹೇಳಲು ಸಾಧ್ಯವಿಲ್ಲ.ಇದು ನಿಜಕ್ಕೂ ದುರದೃಷ್ಟಕರ " ಎಂದು ಅವರು ನುಡಿದರು.
"ನಾನೊಬ್ಬ ಚಿತ್ರ ನಿರ್ಮಾಪಕ. ನನಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಲ್ಲಿ ಅವಕಾಶ ಇಲ್ಲ " ಎಂದು ಕರಣ್ ಜೋಹರ‍್ ಹೇಳಿದರು.
Next Story





