ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ವತಿಯಿಂದ ಜೀಲಾನಿ ಅನುಸ್ಮರಣೆ, ದ್ಸಿಕ್ರ್ ಮಜ್ಲಿಸ್

ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ವತಿಯಿಂದ ಜ.21 ರಂದು ಮಹಬುಲ ದಲ್ಲಿ ಜೀಲಾನಿ ಅನುಸ್ಮರಣೆ ಹಾಗೂ ದ್ಸಿಕ್ರ್ ಮಜ್ಲಿಸ್ ನಡೆಯಿತು. ಕೆಸಿಎಫ್ ಗೌರವ ಅಧ್ಯಕ್ಷರಾದ ಉಮರ್ ಝುಹ್ರಿ ಉಸ್ತಾದರ ನೇತ್ರತ್ವದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಸೈಯದ್ ಅಲವಿ ಸಖಾಫಿ ತಂಙಳ್ ಮಂಗಾಫ್ ಭಾಗವಹಿಸಿದ್ದರು.
ಮುಖ್ಯ ಪ್ರಭಾಷಣದಲ್ಲಿ ತಂಙಳ್ ರವರು ಮುಹಿಯ್ಯದ್ದೀನ್ ಶೇಖ್ ಅಬ್ದುಲ್ ಖಾದಿರ್ ಜೀಲಾನಿ (ಖ.ಅ)ಯವರ ಬಗ್ಗೆ ತಿಳಿಸಿದರು. ವಾಟ್ಸಫ್ ಫೇಸ್ ಬುಕ್ ಎಂದು ಕಾಲ ಕಳೆಯುವ ಯುವ ಸಮೂಹ ಮರಣದ ಮೊದಲು ತೌಬ ಮಾಡಲು ಸಮಯವಿಲ್ಲ. ತನ್ನ ಕುಟುಂಬಕ್ಕಾಗಿ ಸಂಪಾದಿಸುವ ಪ್ರವಾಸಿಯು ತನ್ನ ಆಯುಷ್ಯ ಪೂರ್ತಿ ವಿದೇಶದಲ್ಲಿ ಕಳೆಯುವ ಬದಲು ಎರಡು ಮೂರು ವರ್ಷ ದುಡಿದು ತಾಯ್ನಾಡಿನಲ್ಲಿ ಕುಟುಂಬದವರೊಡನೆ ಸೇರಿ ಸಹಬಾಳ್ವೆ ನೆಡೆಸುವುದು ಶ್ರೇಯಕರ ಎಂದು ಪ್ರವಾಸಿಗರಿಗೆ ಕಿವಿ ಮಾತು ಹೇಳಿದರು.
ಅಲ್ಲಾಹನ ಸ್ಮರಣೆಯಿಂದ ಹೃದಯಕ್ಕೆ ಶಾಂತಿ ಇದೆ. ದ್ಸಿಕ್ರ್ ನಿಂದ ಪಾರತ್ರಿಕ ವಿಜಯ ಹಾಗೂ ನರಕದಿಂದ ಮುಕ್ತಿ ಇದೆ.
ಶೈತಾನನ ಪಿಡುಗಿನಿಂದ ಕಾಯುವ ಭದ್ರ ಕೋಟೆಯಾಗಿದೆ ಅದಕ್ಕಾಗಿ ತಮ್ಮ ಸಮಯವನ್ನು ದ್ಸಿಕ್ರ್ ನಲ್ಲಿ ಕಳೆಯಬೇಕು ಎಂದು ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರು ತಿಳಿಸಿದರು.
ಕೇಂದ್ರ ಕಾರ್ಯದರ್ಶಿ ಮನ್ಸೂರ್ ಕೋಟ ಗದ್ದೆ ಹಾಗೂ ಮಹಬುಲ ಸಾಂತ್ವಾನ ಮುಖ್ಯಸ್ಥರಾದ ಬಾವಕ ಅಲ್ಲದೆ ಅನೇಕ ಕಾರ್ಯಕರ್ತರು ಭಾಗವಹಿಸಿದ ದ್ಸಿಕ್ರ್ ಮಜ್ಲಿಸ್ ಸೈಯದ್ ಅಲವಿ ಸಖಾಫಿ ತಂಙಳ್ ರವರ ದುವಾದೊಂದಿಗೆ ಮುಕ್ತಾಯಗೊಂಡಿತು.








