ಪ್ರಶಾಂತ್ ಕಿಶೋರ್‌ಗೆ ಉನ್ನತ ಹುದ್ದೆಯ "ಉಡುಗೊರೆ" ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ‍್

ಪಾಟ್ನಾ, ಜ.22: ಬಿಹಾರದಲ್ಲಿ ಕಳೆದ ಚುನಾವಣೆಯಲ್ಲಿ ಮುಖ್ಯ ಮಂತ್ರಿ ನಿತೀಶ್ ಕುಮಾರ್‌ಗೆ "ಮಾಸ್ಟರ್‌ಮೈಂಡ್" ಆಗಿದ್ದ ಪ್ರಶಾಂತ್ ಕಿಶೋರ್‌ಗೆ ಕೊನೆಗೂ ಉನ್ನತ ಹುದ್ದೆ ಸಿಕ್ಕಿದೆ. ಇನ್ನು ಮುಂದೆ ಅವರು ಬಿಹಾರ ಮುಖ್ಯ ಮಂತ್ರಿಯ "ನೀತಿ ಮತ್ತು ಯೋಜನೆ" ಅನುಷ್ಠಾನದ ಪ್ರಮುಖ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.
ಈ ಹುದ್ದೆ ಸಂಪುಟ ದರ್ಜೆ ಸ್ಥಾನಮಾನ ಹೊಂದಿದೆ. ಪ್ರಶಾಂತ್ ಕಿಶೋರ್‌ಗೆ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಸಂಪುಟ ದರ್ಜೆ ಸಚಿವ ಸ್ಥಾನಮಾನವನ್ನು ಹೊಂದಿರುವ ಹುದ್ದೆ ನೀಡುವ ಮೂಲಕ ಋಣ ತೀರಿಸಿಕೊಂಡಿದ್ದಾರೆ.
ಸಾರ್ವಜನಿಕ ಆರೋಗ್ಯ ತಜ್ಞರಾದ ಕಿಶೋರ್2011ರಲ್ಲಿ ವಿಶ್ವಸಂಸ್ಥೆಯಲ್ಲಿ ಕೆಲಸಕ್ಕೆ ವಿದಾಯ ಹೇಳಿ ಭಾರತಕ್ಕೆ ವಾಪಸಾಗಿದ್ದರು. . 2012ರ ಗುಜರಾತ್ ಚುನಾವಣೆ ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಬೆನ್ನಿಗೆ ನಿಂತು ಅವರ ಯಶಸ್ವಿಗಾಗಿ ದುಡಿದಿದ್ದರು. ಮೋದಿ ಪ್ರಧಾನಿಯಾದ ಬಳಿಕ ಪ್ರಶಾಂತ್ ಕಿಶೋರ್ ಮೋದಿ ಕ್ಯಾಂಪ್‌ನಿಂದ ದೂರವಾಗಿದ್ದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಮೋದಿ ಕ್ಯಾಂಪ್ ತ್ಯಜಿಸಿದ್ದ ಮೂವತ್ತೇಳರ ಹರೆಯದ ಪ್ರಶಾಂತ್ ಕಿಶೋರ್ ಅವರು ನಿತೀಶ್ ಕುಮಾರ್ ಜೊತೆ ಸೇರಿಕೊಂಡಿದ್ದರು. ನಿತೀಶ್ ಕುಮಾರ‍್ ಅವರ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು.
ಮೋದಿ ಹಾಗೂ ನಿತೀಶ್ ಕುಮಾರ್ ಭರ್ಜರಿ ಗೆಲುವಿನ ಬಳಿಕ ಕಿಶೋರ್‌ಗೆ ಬೇರೆ ರಾಜ್ಯಗಳ ರಾಜಕೀಯ ನಾಯಕರುಗಳಿಂದ ಆಫರ್ ಬಂದಿತ್ತು.ಪಂಜಾಬ್‌ನಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್‌ನ ಅಮರೀಂದರ್ ಸಿಂಗ್ ಅವರಿಗೆ ನೆರವಾಗುವ ಬಗ್ಗೆ ಕಿಶೋರ‍್ ಕುಮಾರ‍್ ಭರಸವಸೆ ನೀಡಿದ್ದಾರೆ. ಆದರೆ ನಿತೀಶ್ ಕುಮಾರ್ ಸ್ನೇಹಿತ ಕಿಶೋರ್‌ಗೆ ತನ್ನ ಕಚೇರಿಯಲ್ಲಿ ಉನ್ನತ ಹುದ್ದೆ ನೀಡಿ ಅವರಿಂದ ಇನ್ನಷ್ಟು ನೆರವು ಪಡೆಯುವ ಬಗ್ಗೆ ಆಲೋಚನೆ ಮಾಡಿದ್ಧಾರೆ.







