ಸುಳ್ಯ: ಕರ್ತವ್ಯಕ್ಕೆ ಅಡ್ಡಿ: ಚಾಲಕನ ಮೇಲೆ ಕೇಸು,
ಸುಳ್ಯ: ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಾಗೂ ಬೆದರಿಕೆ ಹಾಕಿದ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಸ್.ಎನ್.ಗಿರೀಶ್ ಮೋಹನ್ ಆನೆಗುಂಡಿ ಬಳಿ ವಾಹನ ತಪಾಸಣೆ ಮಾಡುವ ಸಂದರ್ಭ ಜಿ.ಕೆ.ಅಬ್ದುಲ್ ರಝಾಕ್ ಎಂಬವರ ಮರಳು ಲಾರಿ ನಿಲ್ಲಸದೇ ಮುಂದೆ ಸಾಗಿದ್ದು, ಅದನ್ನು ಫಾಲೋ ಮಾಡಿ ಪೈಚಾರಿನಲ್ಲಿ ತಡೆದಾಗಿ ಚಾಲಕ ಅಬ್ದುಲ್ ರಝಾಕ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜನವರಿ 1ರಂದು ಉಡುಪಿಯಿಂದ ಮರಳು ಸಾಗಾಟಕ್ಕೆ ಅಧಿಕೃತ ಪರವಾನಿಗೆ ಪಡೆದಿದ್ದು, ಅದನ್ನು ತೋರಿಸಿ ಬಿ.ಸಿ.ರೋಡಿನಿಂದ ಮರಳು ಸಾಗಾಟ ಮಾಡಲಾಗುತ್ತಿತ್ತು ಎಂದು ಗಿರೀಶ್ ಮೋಹನ್ ತಿಳಿಸಿದ್ದಾರೆ.
Next Story





