ಸುಳ್ಯ : ವಿದ್ಯುತ್ ಅಘಾತ - ಅಡಿಕೆ ಕೊಯ್ಯುತ್ತಿದ್ದ ವಿದ್ಯಾರ್ಥಿ ಮೃತ್ಯು
ಸುಳ್ಯ: ವಿದ್ಯುತ್ ಅಘಾತಕ್ಕೀಡಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಐವರ್ನಾಡು ಗ್ರಾಮದಲ್ಲಿ ಸಂಭವಿಸಿದೆ. ಐವರ್ನಾಡಿನ ಕುದುಂಗು ಬಾಬು ನಾಯ್ಕರ ಪುತ್ರ, ಐವರ್ನಾಡು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೀರ್ತನ್ (17) ಮೃತ ಪಟ್ಟವನು. ತಮ್ಮ ಅಡಿಕೆ ತೋಟದಲ್ಲಿ ಗಳೆಯಿಂದ ಅಡಿಕೆ ಕೊಯ್ಯುತ್ತಿದ್ದ ವೇಳೆ ಗಳೆ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಅಘಾತಕ್ಕೊಳಪಟ್ಟ ಕೀರ್ತನ್ ಸ್ಥಳದಲ್ಲೇ ಮೃತಪಟ್ಟನೆಂದು ತಿಳಿದು ಬಂದಿದೆ.
Next Story





