ಮೂಡುಬಿದಿರೆ: ಜಯಕರ್ನಾಟಕ ಮೂಡುಬಿದಿರೆ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ,

ಮೂಡುಬಿದಿರೆ: ಜಯಕರ್ನಾಟಕ ಮೂಡುಬಿದಿರೆ ಘಟಕದ ನೂತನ ಗೌರವಾಧ್ಯಕ್ಷರಾಗಿ ಯುವ ಸಂಘಟಕ, ಉದ್ಯಮಿ ಅರುಣ್ ಪ್ರಕಾಶ್ ಶೆಟ್ಟಿ, ಅಧ್ಯಕ್ಷರಾಗಿ ಉದ್ಯಮಿ ಮಾಧು ಭಂಡಾರಿ ಕಾನ ಅವರು ಆಯ್ಕೆಯಾಗಿದ್ದಾರೆ.
ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರು ಇವರಿಬ್ಬರನ್ನೂ ನೇಮಕಗೊಳಿಸಿ ಆದೇಶ ನೀಡಿದ್ದಾರೆ.
ಉದ್ಯಮಿ ಅರುಣ್ ಪ್ರಕಾಶ್ ಶೆಟ್ಟಿ ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದು, ಪ್ರಸ್ತುತ ಮೂಡುಬಿದಿರೆಯಲ್ಲಿ ನಿಧಿ ಡೆವಲಪರ್ಸ್ ಸಂಸ್ಥೆಯ ಪಾಲುದಾರರಾಗಿದ್ದಾರೆ.
ಮಾಧು ಭಂಡಾರಿ ಅವರು ಮೂಡುಬಿದಿರೆ ಕಾನದವರಾಗಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಪ್ರಸ್ತುತ ಸಿವಿಲ್ ಕಂಟ್ರಾಕ್ಟರ್ ಆಗಿದ್ದಾರೆ.

Next Story





