ಪ್ರಧಾನಿಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದ 22 ಮಂದಿ ವಿಕಲಾಂಗರಿಗೆ ಗಾಯ
ಬಸ್ ಅಪಘಾತ
ವಾರಣಾಸಿ, ಜ.22: ಪ್ರಧಾನಿ ನರೇಂದ್ರ ಮೋದಿ ಸಹಾಯ ವಿತರಿಸಲಿದ್ದ ಕಾರ್ಯಕ್ರಮವೊಂದಕ್ಕಾಗಿ ಹೋಗುತ್ತಿದ್ದ 22 ಮಂದಿ ಭಿನ್ನ ಸಾಮರ್ಥ್ಯದ ವ್ಯಕ್ತಿಗಳು, ಉತ್ತರ ಪ್ರದೇಶದ ಕಪ್ಸೇಥಿ ಪೊಲೀಸ್ ವ್ಯಾಪ್ತಿಯಲ್ಲಿ ಅವರ ಬಸ್ಸು ಕಂಬವೊಂದಕ್ಕೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ಒಟ್ಟು 42 ಮಂದಿ ಭಿನ್ನ ಸಾಮರ್ಥ್ಯದ ವ್ಯಕ್ತಿಗಳಿದ್ದರು. ಗಾಯಾಳುಗಳನ್ನು ವಾರಣಾಸಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಠಾಣಾಧಿಕಾರಿ ಅಶೋಕ್ ಚಂದ್ರ ತಿಳಿಸಿದ್ದಾರೆ.
ಇಂದು ತನ್ನ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿ, ಸುಮಾರು 8 ಸಾವಿರ ಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ಸಹಾಯ ವಿತರಿಸಿದ್ದಾರೆ. ಅವರು ಕೇಂದ್ರ ಸರಕಾರದ ಎಡಿಐಪಿಯ ಸಹಾಯದಿಂದ ಮಾತು ಮತ್ತು ಕೇಳುವಿಕೆಗೆ ಸಂಬಂಧಿಸಿದ ಸಮಸ್ಯೆಯಿಂದ ಮುಕ್ತರಾಗಿರುವ, ದೇಶದ ವಿವಿಧ ಭಾಗಗಳಿಂದ ಬಂದಿದ್ದ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ.
8 ಸಾವಿರ ಫಲಾನುಭವಿಗಳಿಗೆ, ಗಾಲಿಕುರ್ಚಿಗಳು, ಕೈಯಿಂದ ನಡೆಸುವ ಟ್ರೈಸಿಕಲ್‌ಗಳು, ಸ್ಮಾರ್ಟ್ ಕ್ರಚ್‌ಗಳು ಹಾಗೂ ಶ್ರವಣ ಸಾಧನಗಳಂತಹ 25 ಸಾವಿರಕ್ಕೂ ಹೆಚ್ಚು ಸಾಧನಗಳನ್ನು ವಿತರಿಸಲಾಗಿದೆ.





