ವಿದ್ಯಾರ್ಥಿನಿಯರಿಗಾಗಿ 24 ಗಂಟೆ ವಿದ್ಯುತ್, 30 ನರ್ಮ್ ಬಸ್: ಶಾಸಕ ಪ್ರಮೋದ್

ಉಡುಪಿ, ಜ.22: ವಿದ್ಯಾರ್ಥಿನಿಯರನ್ನು ಗಮನದಲ್ಲಿಟ್ಟು ಉಡುಪಿ ತಾಲೂಕಿಗೆ 24 ಗಂಟೆ ವಿದ್ಯುತ್ ಹಾಗೂ ನಗರಕ್ಕೆ 30 ನರ್ಮ್ ಬಸ್‌ಗಳ ವ್ಯವಸ್ಥೆ ಮಾಡ ಲಾಗಿದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ನೇಟಿವ್ ಆರ್ಗನೈಸೇ ಷನ್, ಕಲ್ಯಾಣಪುರ ರೋಟರಿ ಕ್ಲಬ್ ಹಾಗೂ ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದೌರ್ಜನ್ಯ ನಿಯಂತ್ರಣ ಸಮಿತಿಯ ಸಹಯೋಗ ದೊಂದಿಗೆ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾದ ‘ಮಹಿಳೆ- ಮನಸ್ಸು’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇದೀಗ ಹೊಸ ಬಸ್‌ಗಳ ಖರೀದಿಗೆ ಆದೇಶ ಮಾಡಲಾಗಿದೆ. ವಿದ್ಯಾರ್ಥಿ ಗಳಿಗೆ ಅನುಕೂಲವಾ ಗುವ ರೀತಿಯಲ್ಲಿ ಈ ಬಸ್‌ಗಳ ವೇಳಾಪಟ್ಟಿಯನ್ನು ತಯಾರಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಯು.ವಿಶ್ವನಾಥ್ ಶೆಣೈ, ರೋಟರಿ ಸಹಾಯಕ ಗವರ್ನರ್ ಅಲೆಕ್ಸ್ ವಿನಯ್ ಲೂವಿಸ್, ಅಧ್ಯಕ್ಷ ಆನಂದ ಶೆಟ್ಟಿ ಉಪಸ್ಥಿತರಿದ್ದರು. ಸಂಪ ನ್ಮೂಲ ವ್ಯಕ್ತಿಗಳಾಗಿ ಮನೋತಜ್ಞ ಡಾ.ವಿರೂಪಾಕ್ಷ ದೇವರುಮನೆ, ನ್ಯಾಯ ವಾದಿ ಸುನೀಲ್ ಮಾಥ್ಯೂ ಮಾತ ನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ರಾವ್ ವಹಿಸಿದ್ದರು. ನೇಟಿವ್ ಆರ್ಗನೈಸೇಷನ್‌ನ ಕಾರ್ಯಕ್ರಮ ನಿರ್ದೇ ಶಕ ಪ್ರೇಮಾನಂದ್ ಕಲ್ಮಾಡಿ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಉಪನ್ಯಾಸಕಿ ಯಶೋಧಾ ಸ್ವಾಗತಿಸಿ ದರು. ರೋಟರಿಯ ರಾಮಕೃಷ್ಣ ವಂದಿಸಿ ದರು. ವಿದ್ಯಾರ್ಥಿನಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.







