ಬಜ್ಪೆ :ಸೌಹಾರ್ದ ನಗರ ಸ್ವಲಾತ್ ಮಜ್ಲಿಸ್
ಮಂಗಳೂರು, ಜ.22: ಬಜ್ಪೆ ಸೌಹಾರ್ದ ನಗರದ ಮಸ್ಜ್ಜಿದುರ್ರಹ್ಮಾನ್ ಜುಮಾ ಮಸೀದಿ ಹಾಗು ಖಿದ್ಮತುಲ್ ಇಸ್ಲಾಮ್ ಎಸೋಸಿಯೇಶನ್‌ನ ಆಶ್ರಯದಲ್ಲಿ 10ನೆ ವಾರ್ಷಿಕ ಸ್ವಲಾತ್ ಮಜ್ಲಿಸ್ ಅಸ್ಸೈಯದ್ ಇಬ್ರಾಹೀಂ ಅಲ್‌ಹಾದಿ ತಂಙಳ್‌ರ ನೇತೃತ್ವದಲ್ಲಿ ನಡೆಯಿತು.
ವೇದಿಕೆಯಲ್ಲಿ ಮಸ್ಜಿದುರ್ರಹ್ಮಾನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಸಖಾಫಿ, ಅಧ್ಯಕ್ಷ ಅಬ್ದುಲ್ ಹಮೀದ್, ಗೌರವಾಧ್ಯಕ್ಷ ಇಸ್ಮಾಯೀಲ್ ಜಾವಳಿ, ಮಾಜಿ ಅಧ್ಯಕ್ಷರಾದ ಎ. ಮಯ್ಯದ್ದಿ, ಎಂ. ಸೈಯ್ಯದ್, ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಪೇರ ಮಸೀದಿಯ ಖತೀಬ್ ಬದ್ರುದ್ದೀನ್ ಸಖಾಫಿ, ಬೈಲುಪೇಟೆ ಮಸೀದಿಯ ಅಧ್ಯಕ್ಷ ಎಂ.ಎಸ್. ಅಲಿಯಬ್ಬ, ಗ್ರಾಪಂ ಸದಸ್ಯ ಎಂ.ಕೆ. ಅಶ್ರಫ್, ಎಂ.ಎಚ್.ಹಸನಬ್ಬ, ನ್ಯೂಸೈಟ್ ಇಮಾಮ್ ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು.ಖಿದ್ಮತುಲ್ ಇಸ್ಲಾಮ್ ಎಸೋಸಿಯೇಶನ್‌ನ ಅಧ್ಯಕ್ಷ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು.
Next Story





