‘ಬಲಾತ್ಕಾರದ ಬಂದ್-ಕೋಮುಗಲಭೆ ಮುಕ್ತ ಪುತ್ತೂರು’ ಆಂದೋಲನಕ್ಕೆ ಚಾಲನೆ
ಪುತ್ತೂರು, ಜ.22: ಬಲಾತ್ಕಾರದ ಬಂದ್ ಮತ್ತು ಕೋಮು ಅಥವಾ ಇತರ ಯಾವುದೇ ಗಲಭೆಗಳ ವಿರುದ್ಧ ಸುದ್ದಿ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನದ ಅಂಗವಾಗಿ ಪೂರ್ವಭಾವಿ ಸಭೆಯು ಪುತ್ತೂರು ಕೋ- ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದವರು ಬಂದ್ ಅಥವಾ ಯಾವುದೇ ಗಲಭೆ ಸಂದರ್ಭ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತೊಂದರೆಗೊಳಗಾಗುವ ಜನತೆಗೆ ಸಂಪೂರ್ಣ ರಕ್ಷಣೆ ಒದಗಿಸುವ ಭರವಸೆ ನೀಡಿದರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ಪುತ್ತೂರು ಶ್ರೀ ರಾಮಕೃಷ್ಣ ಹೆಣ್ಮಕ್ಕಳ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ನಿವೃತ್ತ ಉಪನ್ಯಾಸಕ ಪ್ರೊ.ಬಿ.ಜೆ. ಸುವರ್ಣ, ಪುತ್ತೂರು ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಇಸಾಕ್ ಸಾಲ್ಮರ, ಜಯಕರ್ನಾಟಕ ಸಂಘಟನೆಯ ಮೊಟ್ಟೆತ್ತಡ್ಕ ಘಟಕದ ಅಧ್ಯಕ್ಷ ಹಾಗೂ ಸ್ನೇಹ ಸಂಗಮ ರಿಕ್ಷಾ ಸಂಘಟನೆಯ ಪದಾಧಿಕಾರಿ ದಿಲೀಪ್ ಕುಮಾರ್, ಆಮ್ ಆದ್ಮಿ ಪಕ್ಷದ ಮುಖಂಡ ಆನಂದ ಗೌಡ ರಾಮಕುಂಜ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸುಂದರ ಗೌಡ, ಜಯಕರ್ನಾಟಕ ತಾಲೂಕು ಅಧ್ಯಕ್ಷ ಹಾಗೂ ಸ್ನೇಹ ಸಂಗಮ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ತಾಪಂ ಕೆಡಿಪಿ ನಾಮನಿರ್ದೇಶಿತ ಸದಸ್ಯ ಕೃಷ್ಣಪ್ರಸಾದ್ ಆಳ್ವ, ನಗರಸಭಾ ಸದಸ್ಯರಾದ ವಿಶ್ವನಾಥ ಗೌಡ, ವಾಣಿ ಶ್ರೀಧರ್, ಮುಖೇಶ್ ಕೆಮ್ಮಿಂಜೆ, ಕೆಎಸ್ಸಾರ್ಟಿಸಿ ಅಬ್ಬಾಸ್ ಕುಂತೂರು, ತಾಪಂ ಸದಸ್ಯೆ ರೊಹರಾ ನಿಸಾರ್, ಜೆಡಿಎಸ್ ಪಕ್ಷದ ಮುಖಂಡ ಅಶ್ರಫ್ ಕೊಟ್ಯಾಡಿ, ನ್ಯಾಯವಾದಿ ಜಯರಾಮ ಚಿಲ್ತಡ್ಕ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮೊಯ್ದಿನ್ ಅರ್ಶದ್ ದರ್ಬೆ ಉಪಸ್ಥಿತರಿದ್ದರು.
ಸಂಚಾಲಕ ಡಾ.ಯು.ಪಿ. ಶಿವಾನಂದ ಪ್ರಾಸ್ತಾ ವಿಕ ಮಾತುಗಳನ್ನಾಡಿದರು. ಜ್ಯೋತಿ ಪ್ರಾಶ್ ಪುಣಚ, ಸಂತೋಷ್ ಶಾಂತಿನಗರ ಮತು್ತ ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.





