ಸ್ಟಾರ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ದಿನಾಚರಣೆ

ಮಂಗಳೂರು, ಜ.22: ನಗರದ ಸ್ಟಾರ್ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಪ್ರತಿಭಾ ದಿನ ಆಚರಿಸಲಾಯಿತು.ಕೆ.ಎಚ್. ಮುಹಮ್ಮದ್ ಈಶ್ವರಮಂಗಲ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಮುಹಮ್ಮದ್ ಸಲೀಂ ಮಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಪ್ರಭಾ ನವೀನ್ ಶುಭ ಹಾರೈಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಹಳೆ ವಿದ್ಯಾರ್ಥಿ ಗೌರವ್ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಣಿಜ್ಯ ವಿಭಾಗದ ಶಿಕ್ಷಕಿ ದೀಪಿಕಾ ಹಾಗೂ ಕಂಪ್ಯೂಟರ್ ಶಿಕ್ಷಕಿ ದೀಪಿಕಾ ವಾಚಿಸಿದರು. ಸಹ ಶಿಕ್ಷಕಿ ದೀಪಾ ಲೋಕನಾಥ್ ವಂದಿಸಿದರು. ಹುಡುಗರ ವಿಭಾಗದ ವ್ಯವಸ್ಥಾಪಕಿ ಶ್ವೇತಾ ಮೋಹನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನೌಶಾದ್ ಮತ್ತು ತೌಫಿಕ್ ನಿರೂಪಿಸಿದರು.
Next Story





