ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಗೆ ಸೂಚನೆ
ಉಡುಪಿ, ಜ.22: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ- 2009ರಡಿ ಜಿಲ್ಲೆಯಲ್ಲಿ ಎಲ್ಲ ವಿವಿಧ ರೀತಿಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಾ ಪ್ರಾಧಿಕಾರದಲ್ಲಿ ನೋಂದಣಿಯನ್ನು ಅಂತರ್ಜಾಲದ ಮೂಲಕ ಮಾತ್ರ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಅದರಂತೆ ಹೊಸದಾಗಿ ಪ್ರಾರಂಭಿಸುವ ಮತ್ತು ಈಗಾಗಲೇ ನೋಂದಾಯಿಸಲ್ಪಟ್ಟ ವೈದ್ಯಕೀಯ ಸಂಸ್ಥೆಗಳ ನವೀಕರಣವನ್ನು ಆನ್‌ಲೈನ್- http://web3.kar.nic.in/kpme ಎಂಬ kpme ಅಪ್‌ಲೋಡ್ ಮಾಡಿ ಅರ್ಜಿಯನ್ನು ದಾಖಲಿಸಬೇಕು. ಡಿಡಿ, ಅರ್ಜಿ ಮತ್ತು ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ನೋಂದಣಾ ಪ್ರಾಧಿಕಾರಕ್ಕೆ ನೀಡಲು ಸೂಚಿಸಲಾಗಿದೆ. ನಂತರವಷ್ಟೇ ಪ್ರಾಧಿಕಾರದಿಂದ ತಪಾಸಣೆ ನಡೆಸಿ, ಪ್ರಮಾಣಿಸಿ ನೋಡಿ ಸಂಸ್ಥೆಗೆ ನೊಂದಣಾ ಪತ್ರವನ್ನು ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಓಉ ವಿಭಾಗದಲ್ಲಿ ಪಡೆದುಕೊಳ್ಳಬಹುದು.
ಜಿಲ್ಲೆಯಲ್ಲಿ ಈ ಕಾಯ್ದೆಯು 2011ರಿಂದ ಜಾರಿಯಲ್ಲಿದ್ದು, ಅದರಂತೆ 2016ಕ್ಕೆ ಅವಧಿ ಪೂರ್ತಿಗೊಳ್ಳಲಿದೆ. ಅವಧಿ ಪೂರ್ಣಗೊಳ್ಳುವ ಆರೋಗ್ಯ ಸಂಸ್ಥೆಗಳು ಆ ದಿನಕ್ಕಿಂತ ಮೊದಲೇ ನವೀಕರಣ ಮಾಡಿಸಿಕೊಳ್ಳಬೇಕು. ನವೀಕರಣವನ್ನು ಸಹ ಆನ್‌ಲೈನ್‌ನಲ್ಲಿ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.





