ಜಿಪಂ, ತಾಪಂ ಚುನಾವಣೆಗೆ ವೀಕ್ಷಕರ, ವೆಚ್ಚ ವೀಕ್ಷಕರ ನೇಮಕ
ಉಡುಪಿ, ಜ.22: ಜಿಲ್ಲೆಯಲ್ಲಿ ಫೆ.20ರಂದು ನಡೆಯುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಮೇಲುಸ್ತುವಾರಿ ವಹಿಸಲು ಇಬ್ಬರು ಚುನಾವಣಾ ವೀಕ್ಷಕರನ್ನು ಹಾಗೂ ಅಭ್ಯರ್ಥಿಗಳು ನಿರ್ವಹಿಸುವ ಚುನಾವಣಾ ವೆಚ್ಚಗಳನ್ನು ಹಾಗೂ ಈ ಸಂಬಂಧ ಬರುವ ದೂರುಗಳನ್ನು ಪರಿಶೀಲಿಸಲು ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಬೆಂಗಳೂರಿನ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲ ಯದ ನಿರ್ದೇಶಕ ಬಿ.ಭೀಮಪ್ಪ ಚುನಾವಣಾ ವೀಕ್ಷಕರಾದರೆ, ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಸಂಸ್ಥೆ ಕೌಸಲ್ಯಾ ಭವನದ ಆಯುಕ್ತ ಜೆ.ಮಂಜುನಾಥ್ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸಾಮಾನ್ಯ ಚುನಾವಣಾ ವೀಕ್ಷಕರಾಗಿರುತ್ತಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಆರ್ಥಿಕ ಸಲಹೆಗಾರರಾಗಿರುವ ಷೇಕ್ ಲತೀಫ್ ಅವರನ್ನು ಚುನಾವಣಾ ವೆಚ್ಚದ ವೀಕ್ಷಕರಾಗಿ ಚುನಾವಣಾ ಆಯೋಗ ನೇಮಿಸಿದೆ.
Next Story





