ಶಿವಮೊಗ್ಗದ ನಿವೇದನ್ ನೆಂಪೆ ಸಂಶೋಧಿಸಿದ ಅಡಿಕೆ ಚಹಾ ಉತ್ಪನ್ನವನ್ನು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಬೆಂಗಳೂರಿನ ಹೊಟೇಲೊಂದರಲ್ಲಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ಸಚಿವ ಕಿಮ್ಮನೆ ರತ್ನಾಕರ್, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ನಿವೃತ ನ್ಯಾಯಾಧೀಶ ಎಂ.ರಾಮಾ ಜೋಯಿಸ್ ಮತ್ತಿತರರು ಉಪಸ್ಥಿತರಿದ್ದರು.