ಕಾಸರಗೋಡು: ಜ.23ರಂದು ರಾಜ್ಯ ಮಟ್ಟದ ಜನಪರ ಯಾತ್ರೆ
ಕಾಸರಗೋಡು : ಜಾತ್ಯತೀತ , ಸಾಮಾಜಿಕ ನ್ಯಾಯ, ಭ್ರಷ್ಟಾಚಾರ ಮುಕ್ತ ಕೇರಳ , ಸುಸ್ಥಿರ ಅಭಿವ್ರದ್ದಿ ಎಂಬ ಘೋಷಣೆ ಯೊಂದಿಗೆ ಸಿಪಿಐ ರಾಜ್ಯ ಅಧ್ಯಕ್ಷ ಕಾನಂ ರಾಜೇಂದ್ರನ್ ನೇತ್ರತ್ವದಲ್ಲಿ ರಾಜ್ಯ ಮಟ್ಟದ ಜನಪರ ಯಾತ್ರೆ 23 ರಂದು ಮಂಜೇಶ್ವರದ ಹೊಸಂಗಡಿಯಿಂದ ಹೊರಡಲಿದೆ.
ಸಂಜೆ ಮೂರು ಗಂಟೆಗೆ ಹೊಸಂಗಡಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್ . ಸುಧಾಕರ ರೆಡ್ಡಿ ಉದ್ಘಾಟಿಸುವರು.
ಮುಖಂಡರಾದ ಪಣ್ಯನ್ ರವಿಂದ್ರನ್ , ಕೆ . ಇ ಇಸ್ಮಾಯಿಲ್ , ಬಿನೋಯ್ ಇಸ್ಮಾಯಿಲ್ , ಕೆ. ಪ್ರಕಾಶ್ ಬಾಬು , ಸಿ . ಎನ್ ಜಯದೇವನ್ ಮೊದಲಾದವರು ಉಪಸ್ಥಿತರಿರುವರು
Next Story





