ದ್ವಿತೀಯ ಪಿಯುಸಿ ಪರೀಕ್ಷೆಯ ಪರೀಷ್ಕೃತ ವೇಳಾಪಟ್ಟಿ ಪ್ರಕಟ, ಫೆ.24ರಿಂದ ಪರೀಕ್ಷೆ ಆರಂಭ

ಬೆಂಗಳೂರು, ಜ.23: ವಿಧಾನಸಭಾ ಉಪಚುನಾವಣೆ ಮತ್ತು ಜಿ.ಪಂ ಮತ್ತು ತಾ.ಪಂ. ಚುನಾವಣೆಯ ಹಿನ್ನೆಲೆಯಲ್ಲಿ 2016ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬದಲಾವಣೆಯಾಗಿದ್ದು,. ಪರಿಷ್ಕೃತ ವೇಳಾ ಪಟ್ಟಿ ಪ್ರಕಟಗೊಂಡಿದೆ.ಫೆಬ್ರವರಿ 24 ರಿಂದ ಪರೀಕ್ಷೆ ಆರಂಭಗೊಂಡು ಮಾರ್ಚ್ 5ರಂದು ಮುಕ್ತಾಯಗೊಳ್ಳಲಿದೆ.
ಬಹುತೇಕ ಎಲ್ಲ ಪರೀಕ್ಷೆಗಳು ಬೆಳಗ್ಗೆ 9 ರಿಂದ ಆರಂಭವಾಗಲಿದೆ., ಉರ್ದು, ಸಂಸ್ಕೃತ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ , ಮನ:ಶಾಸ್ತ್ರ, ತರ್ಕಶಾಸ್ತ್ರ, ಗೃಹವಿಜ್ಞಾನ ಪರೀಕ್ಷೆಗಳು ಮಧ್ಯಾಹ್ನ 2 ರಿಂದ ಸಂಜೆ 5.15ರವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರೀಷ್ಕೃತ ವೇಳಾಪಟ್ಟಿ ಈ ಕೆಳಗಿನಂತಿವೆ.
ಫೆಬ್ರವರಿ 24: (ಬೆಳಗ್ಗೆ 9:00-12:15)-ಹಿಂದಿ. ಮಧ್ಯಾಹ್ನ: 2:00 ಗಂಟೆಗೆ -ಉರ್ದು, ಸಂಸ್ಕೃತ.
ಫೆಬ್ರವರಿ 25: (ಬೆಳಗ್ಗೆ 9:00-12:15)-ಕನ್ನಡ, ತಮಿಳು, ತೆಲುಗು, ಮಳಯಾಲಂ, ಮರಾಠಿ, ಅರೇಬಿಕ್, ಫ್ರೆಂಚ್.
ಫೆಬ್ರವರಿ 26: (ಬೆಳಗ್ಗೆ 9:00-12:15)-ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ . ಮಧ್ಯಾಹ್ನ: 2:00 ಗಂಟೆಗೆ -ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಶಾಸ್ತ್ರ.
ಫೆಬ್ರವರಿ 27: (ಬೆಳಗ್ಗೆ 9:00-12:15)-ಇಂಗ್ಲೀಷ್
ಫೆಬ್ರವರಿ 28: ರಜಾದಿನ.
ಫೆಬ್ರವರಿ 29: (ಬೆಳಗ್ಗೆ 9:00-12:15)- ಭೂಗೋಳಶಾಸ್ತ್ರ ,ಗಣಿತ, ಬೇಸಿಕ್ ಮ್ಯಾಥ್ಸ್.ಮಧ್ಯಾಹ್ನ 2:00ಗಂಟೆಗೆ - ತರ್ಕಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 01: (ಬೆಳಗ್ಗೆ 9:00-12:15)- ಬಿಸಿನೆಸ್ ಸ್ಟಡೀಸ್, ರಸಾಯನಶಾಸ್ತ್ರ, ಶಿಕ್ಷಣ.
ಮಾರ್ಚ್ 02: (ಬೆಳಗ್ಗೆ 9:00-12:15)-ಇತಿಹಾಸ, ಇಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ.
ಮಾರ್ಚ್ 03: (ಬೆಳಗ್ಗೆ 9:00-12:15)- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
ಮಾರ್ಚ್ 04: (ಬೆಳಗ್ಗೆ 9:00-12:15)- ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೌತಶಾಸ್ತ್ರ.
ಮಾರ್ಚ್ 05: (ಬೆಳಗ್ಗೆ 9:00-12:15)- ಸಮಾಜ ಶಾಸ್ತ್ರ, ಜೀವ ಶಾಸ್ತ್ರ.







