ಜಗತ್ತಿನ ವಿಸ್ಮಯ ಕಟ್ಟಡ :ಬುರ್ಜಾ ಅಲ್ ಅರಬ್ ಮತ್ತೆ ದೊಡ್ಡದಾಗುತ್ತಿದೆ !

ದುಬೈ: ಜಗತ್ತಿನ ಬಹುದೊಡ್ಡ ಆಡಂಬರ ಹೋಟೆಲ್ ಎಂದು ಹೇಳಲಾಗುತ್ತಿರುವ ದುಬೈಯ ಬುರ್ಜಾ ಅಲ್ ಅರಬ್ ಸಮುದ್ರದೆಡೆಗೆ ಮತ್ತೆ ದೊಡ್ಡಾಗಲಿದೆ. ಅಂದರೆ ಕೃತಕ ದ್ವೀಪದಲ್ಲಿ ಇದನ್ನು ಸ್ಥಾಪಿಸಲಾಗಿದ್ದು ಹೊಟೇಲ್‌ನಲ್ಲಿ ಅತಿಥಿಗಳಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಸಲುವಾಗಿ ಅದನ್ನು ಪುನಃ ಅದನ್ನು ವಿಸ್ತಾರ ಗೊಳಿಸುವ ಕಾರ್ಯ ನಡೆಯುತ್ತಿದೆ.
ಹೊಟೇಲ್‌ನ ನಾರ್ತ್ ಡೆಕ್ 328 ಅಡಿ ದೊಡ್ಡದಾಗಿ ವಿಸ್ತರಣೆಯ ಕೆಲಸ ಈಗ ನಡೆಯುತ್ತಿದೆ. 400ರಷ್ಟು ಸನ್ ಲಾಂಜ್‌ಗಳನ್ನು ವಿಸ್ತರಿಸುವ ಸ್ಥಳಗಳಲ್ಲಿ ನಿರ್ಮಿಸಲಾಗುವುದು. 2016 ನೆ ವರ್ಷದ ಕೊನೆಯಲ್ಲಿ ಈ ಕೆಲಸ ಪೂರ್ಣಗೊಳ್ಳುವುದು. 6587ಚದರ ಅಡಿ ವಿಸ್ತಾರದ ಶುದ್ಧ ನೀರಿನ ಈಜುಕೊಳ ಮತ್ತು 8912 ಚದರ ಅಡಿ ವಿಸ್ತಾರದ ಸಮುದ್ರ ನೀರಿರುವ ಈಜು ಕೊಳ ಇಲ್ಲಿರಲಿದೆ. ಹೋಟೆಲ್‌ನ ಅತಿಥಿಗಳಿಗೆ ಕಿರಿಕಿರಿ ಆಗದಿರಲಿಕ್ಕಾಗಿ ಈ ಹೊಸ ಭಾಗವನ್ನು ಫಿನ್‌ಲ್ಯಾಂಡ್‌ನಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲಿಂದ ಹಡಗು ಮಾರ್ಗದಲ್ಲಿ ದುಬೈಗೆ ತರಲಾಗುತ್ತದೆ. ಜನವರಿ ಒಂಬತ್ತಕ್ಕೆ ಈ ಭಾಗಹೊರಟಿದೆ. ಫೆಬ್ರವರಿ ಮಧ್ಯಭಾಗದಲ್ಲಿ ಇದು ದುಬೈಗೆ ತಲುಪಲಿದೆ. ಆನಂತರ ಇದನ್ನು ಬುರ್ಜಾ ಅಲ್ ಅರಬ್ ಕಟ್ಟಡಕ್ಕೆ ಜೋಡಿಸುವ ಕಾಮಗಾರಿ ನಡೆಯಲಿದೆ. ಸಮುದ್ರದ ಪರಿಸರಕ್ಕೆ ಅನುಯೋಜ್ಯ ರೀತಿಯಲ್ಲಿ ಮೀನು ಗಳು ಇತರ ಜೀವಜಾಲಗಳಿಗೆ ಇರುವ ಸೌಕರ್ಯಗ ಕಲ್ಪಿಸಿ ಈ ಕೆಲಸ ನಡೆಯಲಿದೆ.





