ಮೂಡುಬಿದಿರೆ: ನಾಪತ್ತೆಯಾಗಿದ್ದ ಮಹಿಯ ಮೃತದೇಹ ಪತ್ತೆ

ಮೂಡುಬಿದಿರೆ: ನಾಪತ್ತೆಯಾಗಿದ್ದ ಮಹಿಳೆ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಘಟನೆ ಮಂಗಳೂರಿನ ನಿಡ್ದೋಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರೇವತಿ ಮಡಿವಾಳ ಎಂದು ಗುರುತಿಸಲಾಗಿದೆ.
ಮೂಡಬಿದ್ರೆ ಸಮೀಪದ ನಿಡ್ಡೋಡಿ ನಿವಾಸಿ ರೇವತಿ 11 ದಿನಗಳ ಹಿಂದೆ ನಾಪತ್ತೆಯಾಯಾಗಿದ್ದು ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದೇ ಸಂದರ್ಭ ಸ್ಥಳೀಯರು ಇಲ್ಲಿನ ನಿವಾಸಿ ಶೇಖರ ಶೆಟ್ಟಿ ಎಂಬತನ ಮೇಲೆ ಸಂಶಯ ವ್ಯಕ್ತ ಪಡಿಸಿ ದೂರು ದಾಖಲಿಸಿದ್ದರು.
ಮೂಡಬಿದ್ರೆ ಪೋಲಿಸರು ಶೇಖರ ಶೆಟ್ಟಿಯನ್ನು ಠಾಣೆಗೆ ಕರೆಸಿ ವಿಚಾರಿಸಿ ಬಿಟ್ಟಿದ್ದರು. ಆ ದಿನಗಳಿಂದ ಶೇಖರ ಶೆಟ್ಟಿ ನಾಪತ್ತೆಯಾಗಿದ್ದ ಎನ್ನಲಾಗಿದೆ. ಆದರೆ ನಾಪತ್ತೆಯಾಗಿದ್ದ ಇರ್ವರೂ ಪತ್ತೆಯಾಗಗಿದ್ದು, ಶೇಖರ ಶೆಟ್ಟಿಯನ್ನು 3 ದಿನಗಳ ಹಿಂದೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಈ ಸಂದರ್ಭ ರೇವತಿಯ ಬಂಗಾರದ ಒಡವೆಗಳನ್ನು ಬ್ಯಾಂಕಿನಲ್ಲಿ ಇಟ್ಟು ಸಾಲ ತೆಗೆದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಆದರೆ ಕೊಲೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ನಿನ್ನೆ ರಾತ್ರಿ ಸ್ಥಳೀಯರು ಸಭೆ ನಡೆಸಿ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಈ ಬಗ್ಗೆ ಬ್ರಹತ್ ಹೋರಾಟ ನಡೆಸುದೆಂದು ತೀರ್ಮಾನಿಸಿ, ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದರು ಕೂಡಲೇ ಎಚ್ಚೆದ್ದ ಪೋಲಿಸರು, ಶೇಖರ ಶೆಟ್ಟಿಯನ್ನು ವಾಪಾಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುವಾಗ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡ.
ಇಂದು ಬೆಳಗ್ಗೆ ಮೂಡುಬಿದಿರೆ ಪೊಲೀಸರು ಶೇಖರ ಶೆಟ್ಟಿಯನ್ನು ಕೊಲೆ ಮಾಡಿದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಪರಿಶೀಲಿಸಿದರು ರೇವತಿಯವರ ಶವ ಕೊಳೆತ ಸ್ಥಿಯಲ್ಲಿತ್ತು, ಪ್ರಕರಣವನ್ನು ಪೊಲೀಸರು ನಿರ್ಲಕ್ಷವನ್ನು ವಹಿಸಿದ್ದಾರೆ ಮಾತ್ರವಲ್ಲದೆ, ಆರೋಪಿಯನ್ನು ನಮಗೆ ಒಪ್ಪಿಸಿ ನಾವೇ ಬುದ್ದಿ ಕಲಿಸುತ್ತೇವೆ ಎಂದು ಸ್ಥಳೀಯರು ಪಟ್ಟುಹಿಡಿದ್ದಿದ್ದು, ಪೋಲಿಸರ ಮತ್ತು ಸ್ಥಳೀಯರ ಮದ್ಯೆ ಮಾತಿನ ಚಕಮಕಿ ನಡೆಯಿತು.
ನಿಡ್ಡೋಡಿಯಲ್ಲಿಯೇ ಟೈಲರ್ ವ್ರತ್ತಿ ನಡೆಸುತ್ತಿದ್ದ ಶೇಖರ ಶೆಟ್ಟಿ ಅನೇಕ ಮಹಿಳೆಯರ ಬಳಿ ಅಸಭ್ಯವಾಗಿ ವರ್ತಿಸುತಿದ್ದ ಮಾತ್ರವಲ್ಲದೆ, ಅನೇಕ ಮಹಿಳೆಯ ಬಳಿ ಸಾಲವನ್ನು ತೆಗೆದುಕೊಂಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.







