ನೇತಾಜಿ 100 ರಹಸ್ಯ ಕಡತಗಳ ಬಿಡುಗಡೆ; ಭಾರತೀಯರ ಪಾಲಿಗೆ ಇಂದು ಮಹತ್ವದ ದಿನ: ಪ್ರಧಾನಿ ಮೋದಿ

ಹೊಸದಿಲ್ಲಿ, ಜ.23: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ದಾಖಲೆಯ 100 ರಹಸ್ಯ ಕಡತಗಳ ಡಿಜಿಟಲ್ ಪ್ರತಿ ಇಂದು ಬಿಡುಗಡೆಗೊಂಡಿತು.
ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 119ನೆ ಜನ್ಮದಿನವಾಗಿರುವ ಇಂದು ಡಿಜಿಟಲೀಕರಣಗೊಂಡ ಅವರ ಕಡತಗಳ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ." ಭಾರತೀಯರ ಪಾಲಿಗೆ ಇಂದು ಮಹತ್ವದ ದಿನ. ಇನ್ನು ಮುಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ದಾಖಲೆಗಳು ಇಂಟರ್‌ನೆಟ್‌ನಲ್ಲಿ ಲಭ್ಯವಾಗಲಿದೆ " ಎಂದು ಮೋದಿ ಅಭಿಪ್ರಾಯಪಟ್ಟರು.
ಪ್ರಧಾನಿ ಈ ಕಾರ್ಯಕ್ರಮದ ಬಳಿಕ ನೇತಾಜಿ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ನೇತಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
Next Story





