ಉಜಿರೆ: ಎನ್.ಸಿ.ಸಿ ವಿದ್ಯಾರ್ಥಿಗಳು ದೆಹಲಿಯ ಪಥಸಂಚಲನಕ್ಕೆ ಆಯ್ಕೆ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎನ್.ಸಿ.ಸಿ. ನೌಕಾ ವಿಭಾಗದ ಕೆಡೆಟ್‌ಗಳಾದ ಸಂಕೇತ್ ಕುಮಾರ್, ಸಾಗರ್ ಕೆ.ಎಚ್., ಹಾಗೂ ರತನ್ ಕುಮಾರ್ ಜನವರಿ 26, 2016 ರಂದು ದೆಹಲಿಯ ರಾಜ್‌ಪಥ್‌ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.
ಕೆಡೆಟ್ ಸಂಕೇತ್ ಕುಮಾರ್ ಹಾಗೂ ಕೆಡೆಟ್ ರತನ್ ಕುಮಾರ್‌ರವರು ಕಾರವಾರದಲ್ಲಿ ನಡೆದ ಆಲ್ ಇಂಡಿಯಾ ನೌಸೈನಿಕ್ ಕ್ಯಾಂಪ್‌ನಲ್ಲಿ ಕೂಡಾ ಭಾಗವಹಿಸಿರುತ್ತಾರೆ.
ದೆಹಲಿಯ ಗಣರಾಜ್ಯೋತ್ಸವದ ಅಂಗವಾದ ಪಿಎಂ ರ್ಯಾಲಿಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೂಮೇಶ್ ಜೆ ಎಸ್. ಭಾಗವಹಿಸುತ್ತಿದ್ದಾರೆ. ಇವರಿಗೆ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀಧರ ಭಟ್ ಮಾರ್ಗದರ್ಶನ ನೀಡಿರುತ್ತಾರೆ.
Next Story





