ಗಣರಾಜ್ಯೋತ್ಸವಕ್ಕೆ ನಗರಸಭಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭ

ಕಾಸರಗೋಡು: ಭಾರತದ 67ನೇ ಗಣರಾಜ್ಯೋತ್ಸವ ದಿನವನ್ನು ಜಿಲ್ಲಾ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಿದ್ದು, ಇದಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಜ. 26ರಮದು ಬೆಳಿಗ್ಗೆ 8 ಗಂಟೆಗೆ ಆಹಾರ, ಸಾರ್ವಜನಿಕ ವಿತರಣೆ, ನೋಂದಣಿ ಇಲಾಖೆ ಸಚಿವ ಅನೂಪ್ ಜೇಕಬ್ ಧ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸುವರು. ಪೊಲೀಸ್, ಎನ್‌ಸಿಸಿ ಜ್ಯೂನಿಯರ್, ಸೀನಿಯರ್ ಡಿವಿಶನ್, ರೆಡ್‌ಕ್ರಾಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೊದಲಾದ ಪ್ಲಾಟೂನ್‌ಗಳು ಪರೇಡ್‌ನಲ್ಲಿ ಭಾಗವಹಿಸುವರು. ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಎಲ್ಲ ಸರಕಾರಿ ನೌಕರರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕಾರ್ಯಕ್ರಮದಂಗವಾಗಿ ವಿದ್ಯಾನಗರದಲ್ಲಿರುವ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಪೊಲೀಸ್, ಎನ್‌ಸಿಸಿ ಜ್ಯೂನಿಯರ್, ಸೀನಿಯರ್ ಡಿವಿಶನ್, ರೆಡ್‌ಕ್ರಾಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೊದಲಾದವರು ಪರೇಡ್‌ನಂಗವಾಗಿ ರಿಹರ್ಸಲ್ ಆರಂಭಿಸಿದ್ದಾರೆ. ಮೂರುದಿನಗಳ ಕಾಲ ಪರೇಡ್ ತಯಾರಿ ನಡೆಯಲಿದೆ.
Next Story





