‘ಸಹಬಾಳ್ವೆಯ ಸಾಗರ’ ಆಹ್ವಾನ ಪತ್ರ ಬಿಡುಗಡೆ

ಉಡುಪಿ, ಜ.23: ಸೌಹಾರ್ದಕ್ಕೆ ಇರುವ ಬಲ ಬೇರೆ ಯಾವುದಕ್ಕೂ ಇಲ್ಲ. ಸಹಬಾಳ್ವೆ ಸಾಗರವು ಸೌಹಾರ್ದತೆಯನ್ನು ಹರಡುವಂತಾಗಬೇಕು ಎಂದು ಲೇಖಕಿ, ಕವಯತ್ರಿ ಜ್ಯೋತಿ ಗುರುಪ್ರಸಾದ್ ಹೇಳಿದ್ದಾರೆ. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ಮಂಗಳೂರಿನ ಪುರಭವನದಲ್ಲಿ ನಡೆಯುವ ‘ಸಹಬಾಳ್ವೆಯ ಸಾಗರ’ ರಾಷ್ಟ್ರೀಯ ಸಮಾವೇಶದ ಆಹ್ವಾನ ಪತ್ರ ಮತ್ತು ಪೋಸ್ಟರ್‌ನ್ನು ಶನಿವಾರ ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಹಾಲ್‌ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿ ದ್ದರು. ಅಧ್ಯಕ್ಷತೆಯನ್ನು ವೇದಿಕೆ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ವಹಿಸಿದ್ದರು. ಉಪಾ ಧ್ಯಕ್ಷ ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು. ಪ್ರೊ. ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು.
Next Story





