ಉಡುಪಿ: ನಕಲಿ ವೈದ್ಯರ ವಿರುದ್ಧ ಕೇಸು
ಉಡುಪಿ, ಜ.23: ನಗರದ ಗೀತಾಂಜಲಿ ಟಾಕೀಸ್ ಬಳಿ ಬಿಸ್ವಾಸ್ ಕ್ಲಿನಿಕ್ ಎಂಬ ಅನಧಿಕೃತ ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆಯ ದವಾಖಾನೆಯನ್ನು ನಡೆಸುತ್ತಿರುವ ಡಾ.ಬಿ.ಕೆ.ಬಿಸ್ವಾಸ್ ಎಂಬವರ ಕ್ಲಿನಿಕ್‌ಗೆ ಉಡುಪಿ ಜಿಲ್ಲಾ ಆಯುಷ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆತ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಮ 2009ರ ಅನ್ವಯ ಅಗತ್ಯ ಪರವಾನಿಗೆ ಹೊಂದಿರದೇ ಇರುವುದು ಹಾಗೂ ಕರ್ನಾಟಕ ರಾಜ್ಯದಲ್ಲಿ ವೈದ್ಯ ವೃತ್ತಿಯನ್ನು ನಡೆಸಲು ಅನರ್ಹರಾಗಿರುವುದು ಕಂಡುಬಂತು.
ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ದವಾಖಾನೆ ವಿರುದ್ಧ ಉಡುಪಿ ನಗರದ ಠಾಣೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿಯಮ 2007ರ ಕಲಂ 7 ಮತ್ತು 19ರನ್ವಯ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಮ 2009ರನ್ವಯ ಪ್ರಕರಣ ದಾಖಲಿಸಲಾಗಿದೆ.
Next Story





