Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ23 Jan 2016 11:30 PM IST
share

ಇಂದು ರಾಜ್ಯ ಮಟ್ಟದ ವಿಚಾರಗೋಷ್ಠಿ-

ಉಡುಪಿ, ಜ.23: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ, ಜಿಲ್ಲಾ ಘಟಕ ಉಡುಪಿ ಇವುಗಳ ವತಿಯಿಂದ ರಾಜ್ಯ ಮಟ್ಟದ ವಿಚಾರಗೋಷ್ಠಿ-ಕವಿಗೋಷ್ಠಿ ಜ.24ರಂದು ಬೆಳಗ್ಗೆ 9 ಗಂಟೆಗೆ ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.

ಇಂದು ಮಕ್ಕಳ ಹಬ್ಬ ಕಾರ್ಯಾಗಾರ

 ಉಡುಪಿ, ಜ.23: ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಹಾಗೂ ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವರ ಜಂಟಿ ಆಶ್ರಯದಲ್ಲಿ ಆಸ್ಪತ್ರೆಯ ಮಕ್ಕಳ ವಾರ್ಗದರ್ಶನ ಕೇಂದ್ರವು ದಿ.ಪ್ರೊ.ಪಿ.ವಿ. ಭಂಡಾರಿಯವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ‘ಮಕ್ಕಳಹಬ್ಬ’ ಕಾರ್ಯಾಗಾರವನ್ನು ಜ.24ರಂದು ಬೆಳಿಗ್ಗೆ 9ಗಂಟೆಗೆ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಹಾಲ್‌ನಲ್ಲಿ ಆಯೋಜಿಸಲಾಗಿದೆ.

   ಕಾರ್ಯಕ್ರಮವನ್ನು ಮೀನಾಕ್ಷಿ ಭಂಡಾರಿ ಉದ್ಘಾಟಿಸಲಿದ್ದು, ಡಾ.ಜೆ.ಎಸ್.ಅಶ್ವತ್‌ಕುವಾರ್ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡಲಿರುವರು. ಅರ್ಚಿತ್ ಱಮಕ್ಕಳು - ಪರಿಸರ ಪ್ರಜ್ಞೆೞಕುರಿತು ಮಾತನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ: ನಾಳೆ ಅಹವಾಲು ಸ್ವೀಕಾರ
ಉಡುಪಿ, ಜ.23: ಉಡುಪಿ ಶಾಸಕ ಪ್ರಮೋದ್ ಮದ್ವರಾಜ್ ಜ.25ರಂದು ಅಪರಾಹ್ನ 3ರಿಂದ 5ರವರೆಗೆ ಉಡುಪಿಯ ತನ್ನ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಇಂದು ಸಹಶಿಕ್ಷಕರ ಸಂಘದ ಸಭೆ
ಮಂಗಳೂರು, ಜ.23: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚುನಾಯಿತ ಹಾಗೂ ನಾಮ ನಿರ್ದೇಶಿತ ಸದಸ್ಯರ ಸಭೆಯನ್ನು ಜ.24ರಂದು ಬೆಳಗ್ಗೆ 10 ಗಂಟೆಗೆ ನಗರದ ಪಂಪ್‌ವೆಲ್ ಬಳಿಯಿರುವ ಮಂಗಳೂರು ದಕ್ಷಿಣ ವಲಯದ ಕ್ಷೇತ್ರದ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದೆ. ಸಭೆಯಲ್ಲಿ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದ ಉನ್ನತೀಕರಣ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸ್ಟ್ಯಾನಿ ತಾವ್ರೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂದರ್ಶನ ಮುಂದೂಡಿಕೆ
ಮಂಗಳೂರು, ಜ.23: ಕರ್ನಾಟಕ ಜನಪದ ಅಕಾಡಮಿ ವತಿಯಿಂದ ಜ.28ರಂದು ದ.ಕ., ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಾನಪದ ಕಲಾವಿದರಿಗೆ ಮಾಸಾಶನ ನೀಡುವ ಬಗ್ಗೆ ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಸಂದರ್ಶನವನ್ನು ಚುನಾವಣಾ ನೀತಿಸಂಹಿತೆ ಕಾರಣದಿಂದ ಮುಂದೂಡಲಾಗಿದೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.

ಫೆ.1,2: ಕಣ್ಣೂರಿನಲ್ಲಿ ಸುನ್ನಿ ಆದರ್ಶ ಸಮಾವೇಶ
ಮಂಗಳೂರು, ಜ.23: ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಅಡ್ಯಾರ್ ಕಣ್ಣೂರು ನೇತೃತ್ವದಲ್ಲಿ ಫೆ.1,2ರಂದು ಸಂಜೆ 4:30ಕ್ಕೆ ಸುನ್ನಿ ಆದರ್ಶ ಸಮಾವೇಶ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಕಣ್ಣೂರಿನ ರಾಜೇಶ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಫೆ.1ರಂದು ವಹ್ಹಾಬ್ ಸಖಾಫಿ ಮಂಬಾಡ್ ಕ್ಲಿಪ್ಪಿಂಗ್ ಸಹಿತ ಸುನ್ನಿ ಆದರ್ಶದ ವಿವರಣೆ ನೀಡಲಿದ್ದಾರೆ. ಫೆ.2ರಂದು ಟಿ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಹುಬ್ಬುರ್ರಸೂಲ್ ಉಪನ್ಯಾಸ ನೀಡುವರು. ಮಖ್ದೂಮಿಯಾ ಬುರ್ದಾ ಇಖ್ವಾನ್ ಸಲೀಂ ಜೌಹರಿ ಕೊಲ್ಲಂ ನೇತೃತ್ವದಲ್ಲಿ ಬುರ್ದಾ ಆಲಾಪನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. ಬೆಳ್ಮ ಬದ್ಯಾರ್: ಪ್ರಾರ್ಥನಾ ದಿನ ಉಳ್ಳಾಲ. ಜ, 23: ಶಂಸುಲ್ ಉಲಮಾ ಇಸ್ಲಾಮಿಕ್ ಮದ್ರಸ ಬೆಳ್ಮ ಬದ್ಯಾರ್ ಇದರ ವತಿಯಿಂದ ಅಗಲಿದ ಸಮಸ್ತ ನೇತಾರರ ಪ್ರಾರ್ಥನಾ ದಿನ ಸಂಗಮವು ಇತ್ತೀಚೆಗೆ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಇಬ್ರಾಹೀಂ ಬದ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಪಾಣಕ್ಕಾಡ್ ಅಸೈಯ್ಯದ್ ಹಾರಿಸ್ ಅಲಿ ಶಿಹಾಬ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಇಸ್ಮಾಯಿಲ್ ಹಾಜಿ ದೇರಳಕಟ್ಟೆ, ಎಸ್ಕೆಎಸ್ಸೆಸ್ಸೆಫ್ ಮುಖಂಡ ಇಬ್ರಾಹೀಂ ಕೊಣಾಜೆ,ಕೆ.ಎಸ್.ಫಾರೂಕ್ ಹಾಜಿ ಕಲ್ಲಡ್ಕ, ನೌಶಾದ್‌ಬದ್ಯಾರ್,ಮುಹಮ್ಮದ್ ಪನೀರ್, ಡಾ. ಸುಲೈಮಾನ್, ಇಲ್ಯಾಸ್ ಹಾಜಿ ಡಿ., ಸಲಾಂ ಬದ್ಯಾರ್, ಲತೀಫ್ ಬದ್ಯಾರ್, ಹನೀಫ್ ಬದ್ಯಾರ್, ರವೂಫ್ ಬದ್ಯಾರ್, ಮುಹಮ್ಮದಲೀ ಹಾಜಿ ದೇರಳಕಟ್ಟೆ, ಹನೀಫ್ ಜೆ. ದೇರಳಕಟ್ಟೆ, ಸೈಯ್ಯದ್ ಅಲಿ ಉಪಸ್ಥಿತರಿದ್ದರು.ದೇರಳಕಟ್ಟೆ ರೇಂಜ್ ಕಣ್ಣಿಯತ್ತ್ ಉಸ್ತಾದ್ ರಿಲೀಫ್ ಸೆಂಟರ್ ಪ್ರಕಟಿಸಿದ ‘ಕ್ಯಾಲೆಂಡರ್’ಅನ್ನು ಬಿಡುಗಡೆಗೊಳಿಸಲಾಯಿತು. ನಿರ್ದೇಶಕ ಕೆ.ಯು. ಖಲೀಲ್ ರಹ್ಮಾನ್ ಅರ್ಶದಿ ಕಾರ್ಯಕ್ರಮ ನಿರೂಪಿಸಿದರು.

ರೋಹಿತ್ ಆತ್ಮಹತ್ಯೆಗೆ ಕೇಂದ್ರ ಸಚಿವರೇ ಹೊಣೆ
 ಮಂಗಳೂರು, ಜ.23: ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಗೆ ವಿವಿ ಕುಲಪತಿ ಹಾಗೂ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮತಿಇರಾನಿಯವರೇ ಹೊಣೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ. ಕುಕ್ಯಾನ್ ಆರೋಪಿಸಿದ್ದಾರೆ.
ಬಿವಿಎಸ್ ಖಂಡನೆ: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ಬೆಳ್ತಂಗಡಿ ತಾಲೂಕು ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ತೀವ್ರವಾಗಿ ಖಂಡಿಸಿದೆ. ಅಂಬೇಡ್ಕರ್ ವಾದ: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವಿಶ್ವವಿದ್ಯಾನಿಲಯ ಆಡಳಿತ ಹಾಗೂ ಕೇಂದ್ರ ಸಚಿವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆ ಹೋರಾಟ ಮಾಡಲಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಚಾಲಕ ಚಂದು ಎಲ್., ಬೆಳ್ತಂಗಡಿ ತಾಲೂಕು ಸಂಚಾಲಕ ವೆಂಕಣ್ಣ ಕೊಯ್ಯೂರು, ಮುಖಂಡರುಗಳಾದ ಶ್ರೀಧರ ಕಳೆಂಜ, ನಾರಾಯಣ ಪುದುವೆಟ್ಟು, ಶೇಖರ ಕುಕ್ಕೇಡಿ, ಜಯಾನಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ


ಶ್ರೀಮಂತಿಕೆ ಪ್ರದರ್ಶನ ಪ್ರವಾದಿಗೆ ಮಾಡುವ ಅನ್ಯಾಯ: ಪೂಕೋಯ ತಂಙಳ್ 
ಪುತ್ತೂರು, ಜ.23: ಪ್ರವಾದಿಯವರು ಸರಳ ಜೀವನಕ್ಕೆ ಮಾದರಿಯಾಗಿದ್ದು, ಇಂದಿನ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಶ್ರೀಮಂತಿಕೆಯ ಪ್ರದರ್ಶನವಾಗುತ್ತಿರುವುದು ಪ್ರವಾದಿಯವರಿಗೆ ಮಾಡುವ ಅನ್ಯಾಯವಾಗಿದೆ. ಈ ಬಗ್ಗೆ ಸಮಾಜದ ಮುಖಂಡರು ಎಚ್ಚೆತ್ತುಕೊಂಡು ಜಾಗೃತಿ ಮೂಡಿಸಬೇಕು ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು. ದರ್ಬೆ ಮಹಮ್ಮದೀಯ ಮದ್ರಸದಲ್ಲಿ ನಡೆದ ಮಿಲಾದುನ್ನಬಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಪ್ರವಾದಿ ದಿನಾಚರಣೆ ಪ್ರಯುಕ್ತ ಹೊರತಂದ ಧಾರ್ಮಿಕ ಸಾಹಿತ್ಯ ಕೃತಿಯನ್ನು ಬಿಡುಗಡೆಗೊಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ದಂತವೈದ್ಯ ಡಾ. ಇಸ್ಮಾಯೀಲ್ ಸರ್ಪಾಝ್ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ದರ್ಬೆ ಪಿ. ಅಬ್ದುಲ್ಲ ಹಾಜಿ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಕಾರ್ಯದರ್ಶಿ ಎಲ್.ಟಿ. ಅಬ್ದುರ್ರಝಾಕ್ ಹಾಜಿ, ಉಪಾಧ್ಯಕ್ಷ ಯಾಕೂಬ್ ಹಾಜಿ, ಇಬ್ರಾಹೀಂ ಹಾಜಿ, ಬಿ.ಕೆ. ಉಸ್ಮಾನ್ ಹಾಜಿ, ಅಬ್ದುಲ್ ಅಝೀಝ್, ಹಸೈನಾರ್ ಪಿ.ಬಿ., ಯೂಸುಫ್, ಮದ್ರಸ ಶಿಕ್ಷಕ ಅಬ್ದುಲ್ ಖಾದರ್ ಮುಸ್ಲಿಯಾರ್, ಯೂನುಸ್ ಖಾನ್ ಉಪಸ್ಥಿತರಿದ್ದರು. ಮದ್ರಸ ಅಧ್ಯಕ್ಷ ಅಬ್ದುರ್ರಹ್ಮಾನ್ ಆಝಾದ್ ಸ್ವಾಗತಿಸಿದರು. ಸದರ್ ಅಬ್ದುಲ್ ಹಮೀದ್ ಮುಸ್ಲಿಯಾರ್ ವಂದಿಸಿದರು. ಉಪಾಧ್ಯಕ್ಷ ಎಂ.ಎಂ. ಅಬ್ದುಲ್ ಅಝೀಝ್ ಕಾರ್ಯಕ್ರಮ ನಿರೂಪಿಸಿದರು. 

ಕುವೆನಾಡು: ವಿದ್ಯಾರ್ಥಿಗಳ ಪ್ರತಿಭೋತ್ಸವ
ಉಳ್ಳಾಲ, ಜ, 23: ಹಝ್ರತ್ ಖ್ವಾಜಾ ಗರೀಬ್ ನವಾಝ್ ಯಂಗ್‌ಮೆನ್ಸ್ ಅಸೋಸಿಯೇಶನ್ ಕುವೆನಾಡು ಇದರ ಆಶ್ರಯದಲ್ಲಿ ಮಿಲಾದ್ ಕಾರ್ಯಕ್ರಮ, ಪ್ರತಿಭೋತ್ಸವ ಹಾಗೂ ಮದ್‌ಹುರ್ರಸೂಲ್ ಪ್ರಭಾಷಣವು ಉರುಮಣೆ ಮರ್‌ಹೂಂ ಇಬ್ರಾಹಿಂ ವೇದಿಕೆಯಲ್ಲಿ ಇತ್ತೀಚೆಗೆ ನಡೆಯಿತು.
  ಸೈಯದ್ ಸಿರಾಜುದ್ದೀನ್ ಪೂಕುಂಞಿ ತಂಙಳ್ ಅಲ್-ಹಾದಿ ಅಡ್ಯಾರ್ ಕಣ್ಣೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾಫಿಳ್ ಶಮ್ಮೀಸ್ ಖಾನ್ ನಾಫಿಹ್ ತೊಡುಪುಝ ಇಡುಕಿ ಮದ್‌ಹುರ್ರಸೂಲ್ ಪ್ರಭಾಷಣ ಗೈದರು. ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಶಕಗಳ ಕಾಲದಿಂದ ಉರುಮಣೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸೇವೆಗೈಯುತ್ತಿರುವ ಉಸ್ತಾದ್ ಅಬ್ಬಾಸ್ ಮುಸ್ಲಿಯಾರ್‌ರನ್ನು ಸನ್ಮಾನಿಸಲಾಯಿತು. ಮುಹಮ್ಮದ್ ಸಖಾಫಿ ಪೂಡಲ್, ಮಂಜನಾಡಿಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಜಾಮಿಯಾ ದಾರುಸ್ಸಲಾಂ ಅಧ್ಯಕ್ಷ ಹಾಜಿಮೊಯ್ದಿನ ಕುಂಞಿಮರಾಠಿ ಮೂಲೆ, ಅಬ್ದುರ್ರಹ್ಮಾನ್‌ಕೆ.ಎ. ಕುವೆನಾಡು, ಅಬ್ದುರ್ರಝಾಕ್ ಅಝ್‌ಹರಿ,ಎಂ.ಕೆ. ಅಬ್ಬಾಸ್ ಮದ್ಪಾಡಿ, ಬಶೀರ್ ಹಾಜಿಉರುಮಣೆ, ಹಾಜಿ ಅಬ್ಬಾಸ್ ಉರುಮಣೆ, ಇಸ್ಮಾಯೀಲ್ ಅಸೈ, ಹಾಜಿ ಮೊಯ್ದಿನ್ ಕುಂಞಿ ಮದ್ಪಾಡಿ, ಎಂ. ಹಸೈನಾರ್ ಉರುಮಣೆ,ಕೆ.ಕೆ. ಕಬೀರ್‌ಕುವೆನಾಡು, ಅಹ್ಮದ್ ಹಾಜಿ ಕುವೆನಾಡು, ಅಲಿ ಹೈದರ್ ಫೈಝಿ ಕುವೆನಾಡು, ಹಸೈನಾರ್ ಯು., ಬಾವಾ ಎ.ಕೆ. ಕುವೆನಾಡು, ಹಮೀದ್ ಎಂ.ಕೆ. ಕುವೆನಾಡು, ಮುಹಮ್ಮದ್ ರಫೀಕ್ ಕುವೆನಾಡು,ಆತೀಫ್.ಕೆ, ಲತೀಫ್ ಕುವೆನಾಡು,ಹಮೀದ್ ಎಚ್.ಎಂ. ಮದ್ಪಾಡಿ, ಕುಂಞಿ ಬಾವ ಮದ್ಪಾಡಿ, ಕೆ.ಎಂ. ಕುಂಞಿ ಬಾವ ಕುವೆನಾಡು ಉಪಸ್ಥಿತರಿದ್ದರು.ಮುಹಮ್ಮದ್‌ಅಶ್ರಫ್ ಅಝ್‌ಹರಿ ಕುವೆನಾಡ್ ಸ್ವಾಗತಿಸಿದರು. ನಾಸಿರ್ ಎ.ಕೆ. ಕುವೆನಾಡು ವಂದಿಸಿದರು.


ಮನ್‌ಶರ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ
 ಬೆಳ್ತಂಗಡಿ, ಜ.23: ಗೇರುಕಟ್ಟೆಯಲ್ಲಿ ಕಳೆದ 6 ವರ್ಷಗಳಿಂದ ಕಾರ್ಯಾಚರಿ ಸುತ್ತಿರುವ ಸಮನ್ವಯ ಶಿಕ್ಷಣ ಕೇಂದ್ರ ಮನ್‌ಶರ್ ವಿದ್ಯಾಸಂಸ್ಥೆಯ ಅಧೀನದ ಮನ್‌ಶರ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ಸಂಸ್ಥೆಯ ಅಧ್ಯಕ್ಷ ಸೈಯದ್ ಉಮರ್ ಅಸ್ಸಖಾಫ್ ತಂಙಳ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ವಸಂತ್ ಕುಮಾರ್ ನಿಟ್ಟೆ ಭಾಗವಹಿಸಿದ್ದರು. ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಹಾಜಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಗ್ರಾಪಂ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಉಪಸ್ಥಿತರಿದ್ದರು. ಸಾದಿಕ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಎಲ್ಸಾ ಜೋಬಿ ವರದಿ ವಾಚಿಸಿದರು.


ನೂರು ಎಕರೆಯಲ್ಲಿ ಫಾರ್ಮಾ ಪಾರ್ಕ್: ಖಾದರ್
ಮಂಗಳೂರು, ಜ.23: ತಾಲೂಕಿನ ಮುಡಿಪು ಕೈಗಾರಿಕಾ ಪ್ರದೇಶದ 100 ಎಕರೆ ಪ್ರದೇಶದಲ್ಲಿ ಬೃಹತ್ ಫಾರ್ಮ್ ಪಾರ್ಕ್ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು. ಅವರು ಇಂದು ನಗರದ ಖಾಸಗಿ ಹೊಟೆಲ್‌ನಲ್ಲಿ ಕರ್ನಾಟಕ ರಾಜ್ಯ ಔಷಧ ತಯಾರಕರ ಸಂಘದ ಪದಾಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದರು. ಔಷಧ ತಯಾರಕರ ಸಂಘದ ಪದಾಧಿಕಾರಿಗಳು ಫಾರ್ಮಾ ಪಾರ್ಕ್ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿದ್ದು, ಕೆಲವು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಇತ್ಯಾದಿಗಳನ್ನು ಸಮರ್ಪಕವಾಗಿ ಒದಗಿಸಿದಲ್ಲಿ ತಾವು ಔಷಧ ತಯಾರಿಕಾ ಘಟಕಗಳನ್ನು ಆರಂಭಿಸುವುದಾಗಿ ಸಚಿವರಿಗೆ ಭರವಸೆ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಪುನರ್ವನವ ಆರ್ಯುವೇದ ಗೋಸ್ವಾಲ್ ಕಂಪೆನಿಯ ಡಾ.ತನ್ಮಯ್ ಗೋಸ್ವಾಮಿ, ಲೇಕ್ ಕೆಮಿಕಲ್ ಸಂಸ್ಥೆಯ ಮನೋಜ್ ಪಾಲ್ ರಿಚೆ ಮುಂತಾದವರು ಸಭೆಯಲ್ಲಿ ಹಾಜರಿದ್ದರು.


ಭದ್ರಗಿರಿ: ಪದಾಧಿಕಾರಿಗಳ ಆಯ್ಕೆ
ಬ್ರಹ್ಮಾವರ, ಜ.23: ಭದ್ರಗಿರಿ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಅಲ್ ಅಮೀನ್ ಯಂಗ್‌ಮೆನ್ಸ್ ಸೋಸಿಯೇಶನ್‌ನ ಮಹಾಸಭೆಯು ಇತ್ತೀಚೆಗೆ ಮಸೀದಿಯಲ್ಲಿ ಜರಗಿತು. ಮಸೀದಿಯ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಬ್ದುರ್ರಹ್ಮಾನ್ ಸಅದಿ ಉಪಸ್ಥಿತರಿದ್ದರು.2016-17ನೆ ಸಾಲಿನ ನೂತನ ಗೌರವಾಧ್ಯಕ್ಷರಾಗಿ ಮುಹಮ್ಮದ್ ರಫೀಕ್, ಅಧ್ಯಕ್ಷರಾಗಿ ಸೈಯದ್ ಅನೀಶ್, ಉಪಾಧ್ಯಕ್ಷರಾಗಿ ಮುಹಮ್ಮದ್ ಫೈಝಲ್‌ರವರನ್ನು ಆಯ್ಕೆ ಮಾಡಲಾಯಿತು.

ಸಣ್ಣ ಕೈಗಾರಿಕೆಗಳು ಅಪಾಯದಲ್ಲಿ: ವಿನಯ್ ಹೆಗ್ಡೆ

ಮಂಗಳೂರು, ಜ.23: ಶೇ.25ರಷ್ಟು ದರ ವ್ಯತ್ಯಾಸದಲ್ಲಿ ಚೀನಾದ ಕೈಗಾರಿಕೆಗಳು ಬಿಡಿ ಭಾಗಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ಸಣ್ಣ ಕೈಗಾರಿಕೆಗಳು ಸ್ಪರ್ಧೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಎನ್.ವಿನಯ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ. ಎಂಎಸ್‌ಎಂಇ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಮಂಗಳೂರು ಘಟಕ, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರು ಮತ್ತು ಮಂಗಳೂರಿನ ಸಣ್ಣ ಕೈಗಾರಿಕೆ ಸಂಘ, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಕೆನರಾ ಸಣ್ಣ ಕೈಗಾರಿಕೆ ಸಂಘದ ವತಿಯಿಂದ ಕದ್ರಿಯಲ್ಲಿರುವ ಕೆಪಿಟಿ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಮಾರಾಟಗಾರರ ಅಭಿವೃದ್ಧಿ ಯೋಜನೆಯ ಕೈಗಾರಿಕಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬೃಹತ್ ಕೈಗಾರಿಕೆಗಳಿಗೆ ಅಗತ್ಯವಾದ ಬಿಡಿಭಾಗಗಳು ಕಡಿಮೆ ದರದಲ್ಲಿ ಚೀನಾದಿಂದ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ಸಣ್ಣ ಕೈಗಾರಿಕೆಗಳನ್ನು ಉಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಶಾಸಕ ಜೆ.ಆರ್.ಲೋಬೊ ಮಾತನಾಡಿ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ ಏಕಗವಾಕ್ಷಿ ಸ್ವಾಯತ್ತ ನಿಯಂತ್ರಣಾ ಪ್ರಾಧಿಕಾರ ರಚನೆ ಬಗ್ಗೆ ತಾನು ಸರಕಾರದ ಕಾರ್ಯದರ್ಶಿಯಲ್ಲಿ ಮಾತುಕತೆ ನಡೆಸಿದ್ದೇನೆ ಎಂದರು.
ಬೆಂಗಳೂರು ಕೆಎಸ್‌ಎಸ್‌ಐಎ ಅಧ್ಯಕ್ಷ ವಿ.ಕೆ.ದೀಕ್ಷಿತ್ ಮಾತನಾಡಿ, ಕಾರ್ಮಿಕ ಕಾನೂನು, ಜಮೀನು ಪರಾಭಾರೆ, ವಿದ್ಯುತ್, ನೀರು ಸಹಿತ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಸಣ್ಣ ಕೈಗಾರಿಕೆದಾರರು ಒಗ್ಗಟ್ಟಾಗಿ ಓಟ್ ಬ್ಯಾಂಕ್ ಆದಾಗ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ ಎಂದರು.
ಬೆಂಗಳೂರು ಎಂಎಸ್‌ಎಂಇ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಎಸ್.ಎನ್.ರಂಗಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು, ಕೆಎಸ್‌ಐಎ ಮಂಗಳೂರು ಘಟಕ ಅಧ್ಯಕ್ಷ ಹೆನ್ರಿ ಸಿ.ಎ್.ಬ್ರಿಟ್ಟೊ, ಬೆಂಗಳೂರು ಘಟಕದ ಪದ್ಮನಾಭ, ಕೆ.ಬಿ.ಅರಸಪ್ಪ, ಡಿಎಸ್‌ಐ ಉಪಾಧ್ಯಕ್ಷ ಅಣ್ಣಪ್ಪ ಉಪಸ್ಥಿತರಿದ್ದರು.ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಗೋಕುಲ್‌ದಾಸ್ ನಾಯಕ್ ಸ್ವಾಗತಿಸಿದರು. ಎಂಎಸ್‌ಎಂಇ ಡೆವಲಪ್‌ಮೆಂಟ್‌ಇನ್‌ಸ್ಟಿಟ್ಯೂಟ್‌ನ ಮಂಗಳೂರು ಘಟಕದ ಉಪ ನಿರ್ದೇಶಕ ಕೆ.ಸಾಕ್ರಟಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಾ ಕಾಲೇಜಿನ ಕ್ರೀಡೋತ್ಸವ
ಮಂಗಳೂರು, ಜ.23: ಹಿರಾ ಮಹಿಳಾ ಕಾಲೇಜಿನ 2015-16ನೆ ಸಾಲಿನ ಕ್ರೀಡಾ ವಾರ್ಷಿಕೋತ್ಸವವು ಕಾಲೇಜಿನ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು. ಕಾಲೇಜಿನ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಜ್ ಪಾರಿವಾಳವನ್ನು ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ.ಆರ್., ಹಿರಾ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಕನೀಝ್, ಹಿರಾ ಗರ್ಲ್ಸ್ ಹೈಸ್ಕೂಲಿನ ಮುಖ್ಯಸ್ಥೆ ವನಜಾಕ್ಷಿ, ಹಿರಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಸೌಜನ್ಯಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X