ಪ್ರತಿಭಟನೆಯಿಂದ ಹಿಂದೆ ಸರಿಯಲು ಸಚಿವ ಕುಶ್ವಾಹಾ ಮನವಿ
ಹೈದರಾಬಾದ್,ಜ.23: ಸಂಶೋಧನಾ ವಿಭಾಗದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ವಿರೋಧಿಸಿ ಹೈದರಾಬಾದ್ ಕೇಂದ್ರೀಯ ವಿವಿ ವಠಾರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಕೈಬಿಡುವಂತೆ ಮಾನವ ಸಂಪನ್ಮೂಲಗಳ ಅಭಿವೃದ್ಧಿ ರಾಜ್ಯ ಸಚಿವ ಉಪೇಂದ್ರ ಕುಶ್ವಾಹಾ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘‘ ತನಿಖೆಗಾಗಿ ನಮ್ಮ ಸಚಿವಾಲಯದಿಂದ ನ್ಯಾಯಾಂಗ ಆಯೋಗವನ್ನು ರಚಿಸಲಾ ಗಿದೆ.ಚಳವಳಿಯನ್ನು ಮುಂದುವರಿಸುವಂತಹ ಯಾವುದೇ ಅಗತ್ಯ ಇನ್ನಿಲ್ಲ ’’ ಎಂದು ಅವರು ಹೇಳಿದರು.
‘‘ಇಬ್ಬರು ಸದಸ್ಯರನ್ನು ಹೊಂದಿದ ಸತ್ಯಶೋಧನಾ ಸಮಿತಿಯು ಪ್ರಕರಣವನ್ನು ಪರಿಶೀಲನೆಗೆ ಒಳಪಡಿಸಿದ್ದು, ವರದಿಯನ್ನು ಸಲ್ಲಿಸಿದೆ. ಕೆಲವೊಂದು ಲೋಪಗಳು ಸಂಭವಿಸಿರುವುದಾಗಿ ವರದಿ ಹೇಳಿದೆ. ವರದಿಯನ್ನು ಆಧರಿಸಿ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸಲಾಗಿದೆ. ಆಯೋಗವು ತನ್ನ ಕೆಲಸಗಳನ್ನು ಮಾಡಲಿದ್ದು, ಮೂರು ತಿಂಗಳಲ್ಲಿ ವರದಿ ನೀಡಲಿದೆ. ಇದರ ಅನ್ವಯ ಸಚಿವಾಲಯವು ಅಗತ್ಯ ಕ್ರಮ ಕೈಗೊಳ್ಳಲಿದೆ ’’ ಎಂದರು.
Next Story





