ಹೂಡೆ ಸಾಲಿಹಾತ್ ಸ್ಕೂಲ್ ವಿಸ್ತರಣಾ ಕಟ್ಟಡ ಉದ್ಘಾಟನೆ

ಉಡುಪಿ, ಜ.23: ಹೂಡೆ ಮುಹಮ್ಮದೀಯ ಎಜುಕೇಶನ್ ಟ್ರಸ್ಟ್ ಅಧೀನದಲ್ಲಿರುವ ಸಾಲಿಹಾತ್ ಆಂಗ್ಲ ಮಾಧ್ಯಮ ಫ್ರೌಡಶಾಲೆಯ ನೂತನ ವಿಸ್ತರಣಾ ಕಟ್ಟಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರಗಿತು.
ಉದ್ಯಮಿ ಜಮಾಲುದ್ದಿನ್ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭ ಅಬ್ಕೊ ಸ್ಟೀಲ್ ಕಂಪೆನಿಯ ಮಾಲಕ ಹಿದಾಯತುಲ್ಲಾ ಕಾಝಿ, ಟ್ರಸ್ಟ್ ಅಧ್ಯಕ್ಷ ಇಸ್ಮಾಯೀಲ್ ಸಾಹೇಬ್, ಟ್ರಸ್ಟಿಗಳಾದ ಮುಹಮ್ಮದ್ ಮೌಲ, ಅಬ್ದುಲ್ ಕಾದಿರ್, ಇದ್ರಿಸ್ ಹೂಡೆ, ಇಮ್ತಿಯಾಝ್ ಜಿ., ಮೌಲಾನಾ ಆದಂ ಸಾಹೇಬ್ ಉಪಸ್ಥಿತರಿದ್ದರು.
ಟ್ರಸ್ಟಿ ಅಕ್ಬರ್ ಅಲಿ ಉಡುಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ವಂದಿಸಿದರು. ಶುಹೈಬ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.
Next Story





